ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಸೂದೆ ಜಾರಿವರೆಗೂ ಮೈದಾನ ಬಿಟ್ಟು ಕದಲಲ್ಲ: ಅಣ್ಣಾ (Anna hazare | Lokpall bill | Ramlila maidan | Janlokpall)
PTI
ತಿಹಾಲ್ ಜೈಲಿನಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ರಾಮಲೀಲಾ ಮೈದಾನಕ್ಕೆ ಆಗಮಿಸಿದ ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಜಾರಿಯಾಗುವವರೆಗೆ ಮೈದಾನ ಬಿಟ್ಟು ಕದಲುವುದಿಲ್ಲ ಎಂದು ಘೋಷಿಸಿದ್ದಾರೆ.

ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದೆ. ಲೋಕಪಾಲ ಮಸೂದೆಗಾಗಿ ತೆಲೆಕೊಡಲು ಸಿದ್ಧ. ಆದರೆ, ಸರಕಾರದ ಮುಂದೆ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತದಲ್ಲಿ ಹೊಸ ಕ್ರಾಂತಿ ನಡೆಯಬೇಕಾಗಿದೆ. ಜನಲೋಕಪಾಲ ಮಸೂದೆಯಿಂದ ದೇಶದಲ್ಲಿ ಪರಿವರ್ತನೆಯಾಗಲಿದೆ. ಪರಿವರ್ತನೆಯಿಂದ ದೇಶದಲ್ಲಿ ಹೊಸ ಕ್ರಾಂತಿಯಾಗಲಿದೆ ಎಂದರು.

ಯುವಕರ ಶಕ್ತಿ ದೇಶದ ಶಕ್ತಿಯಾಗಿದೆ. ಅಣ್ಣಾ ಹಜಾರೆ ಇರಲಿ ಅಥವಾ ಇಲ್ಲದಿರಲಿ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿರಂತರವಾಗಿ ಮುಂದುವರಿಯಲಿ ಎಂದು ಕರೆ ನೀಡಿದರು.

ಭ್ರಷ್ಟಾಚಾರದಿಂದ ದೇಶವೇ ಲೂಟಿಯಾಗುತ್ತಿದೆ. ಇಂತಹ ಲೂಟಿಕೋರರನ್ನು ಶಿಕ್ಷಿಸಲು ಸಶಕ್ತ ಜನಲೋಕಪಾಲ ಮಸೂದೆ ಅಗತ್ಯವಾಗಿದೆ ಎಂದರು.

ರಾಜ್‌ಘಾಟನಲ್ಲಿರುವ ಮಹಾತ್ಮ ಗಾಂಧಿ ಸಮಾದಿಗೆ ಭೇಟಿ ನೀಡಿದ ಅಣ್ಣಾ ಹಜಾರೆ, ಮಧ್ಯಾಹ್ನ 2 ಗಂಟೆಗೆ ರಾಮಲೀಲಾ ಮೈದಾನಕ್ಕೆ ಆಗಮಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಲೋಕಪಾಲ ಮಸೂದೆ, ರಾಮಲೀಲಾ ಮೈದಾನ, ಜನಲೋಕಪಾಲ ಮಸೂದೆ