ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಆರೋಗ್ಯ ವಿಚಾರಣೆಗೆ 35 ವೈದ್ಯರು ತಂಡ (Ramlila Maidan | Anna Hazare | Lokpal Bill | Anna Hazare)
PTI
ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆಯವರ ಆಮರಣ ನಿರಶನ ಐದನೇ ದಿನಕ್ಕೆ ಕಾಲಿರಿಸಿದ್ದು, ದೇಶದ ಖ್ಯಾತ ಹೃದಯರೋಗ ತಜ್ಞ ಡಾ.ತ್ರೆಹಾನ್ ನೇತೃತ್ವದಲ್ಲಿ 35 ವೈದ್ಯರ ತಂಡ ಅಣ್ಣಾ ಆರೋಗ್ಯದ ಬಗ್ಗೆ 24 ಗಂಟೆಗಳ ನಿಗಾವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಸಶಕ್ತ ಲೋಕಪಾಲ ಮಸೂದೆಗಾಗಿ ಆಮರಣ ನಿರಶನ ಕೈಗೊಂಡಿರುವ ರಾಮಲೀಲಾ ಮೈದಾನದಲ್ಲಿ, ವೈದ್ಯಕೀಯ ಶಿಬಿರವನ್ನು ಸ್ಥಾಪಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಿಹಾರ್ ಜೈಲಿನಿಂದ ರಾಮಲೀಲಾ ಮೈದಾನಕ್ಕೆ ಆಗಮಿಸಿದ ಅಣ್ಣಾ ಹಜಾರೆ, ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ನಂತರ ವೈದ್ಯಕೀಯ ಚಿಕಿತ್ಸೆಗೊಳಗಾದರು. ವೈದ್ಯರು ರಕ್ತದೊತ್ತಡ ಪರೀಕ್ಷೆ ನಡೆಸಿದ್ದು, ಅಣ್ಣಾ ಆರೋಗ್ಯ ಉತ್ತಮವಾಗಿದೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.

ಡಾ ತ್ರೆಹಾನ್ ಮಾತನಾಡಿ, ಇಲ್ಲಿಯವರೆಗೆ ಅಣ್ಣಾ ಹಜಾರೆಯವರ ಆರೋಗ್ಯ ಉತ್ತಮವಾಗಿದೆ. ಯಾವುದೇ ತೊಂದರೆಯಿಲ್ಲ. ದಿನದ 24 ಗಂಟೆಯೂ ಅವರ ಆರೋಗ್ಯ ತಪಾಸಣೆಯ ಬಗ್ಗೆ ಎಚ್ಚರವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ,ಕಳೆದ ಆಗಸ್ಟ್ 16 ರಿಂದ ಆಮರಣ ನಿರಶನದಿಂದಾಗಿ 3 ದಿನಗಳ ಅವಧಿಯಲ್ಲಿ 3 ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಘೋಷಿಸಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಾಮಲೀಲಾ ಮೈದಾನ, ಅಣ್ಣಾ ಹಜಾರೆ, ಲೋಕಪಾಲ ಮಸೂದೆ, ಅಣ್ಣಾ ಹಜಾರೆ