ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐದನೇ ದಿನಕ್ಕೆ ಕಾಲಿರಿಸಿದ ಅಣ್ಣಾ ಹಜಾರೆ ನಿರಶನ (Lokpal Bill | India against corruption | Anna Hazare)
PTI
ಜನಲೋಕಪಾಲ ಮಸೂದೆ ಜಾರಿಗಾಗಿ ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆಯವರ ಆಮರಣ ನಿರಶನ ಐದನೇ ದಿನಕ್ಕೆ ಕಾಲಿರಿಸಿದೆ.

ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 3.5ಕೆಜಿ ಭಾರವನ್ನು ಕಳೆದುಕೊಂಡಿದ್ದೇನೆ. ಆದರೆ, ಕಳವಳಪಡುವ ಅಗತ್ಯವಿಲ್ಲ. ಜನಲೋಕಪಾಲ ಮಸೂದೆ ಜಾರಿಯಾಗುವವರೆಗೆ ಹೋರಾಟ ನಿಲ್ಲದು ಎಂದು ಹಜಾರೆ ಘೋಷಿಸಿದ್ದಾರೆ.

ಭ್ರಷ್ಟಾಚಾರದಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಅಗತ್ಯತೆ ಎದುರಾಗಿರುವುದರಿಂದ, ಜನಲೋಕಪಾಲ ಮಸೂದೆ ಜಾರಿಗೆಯಾಗುವವರೆಗೆ ಆಮರಣ ನಿರಶನ ಮುಂದುವರಿಯಲಿದೆ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಸೆಪ್ಟೆಂಬರ್ 2ರವರೆಗೆ ಆಮರಣ ನಿರಶನಕ್ಕಾಗಿ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಅಣ್ಣಾ ಹಜಾರೆಗೆ ದೇಶ ವಿದೇಶಗಳಲ್ಲಿ ಕೂಡಾ ಭಾರಿ ಬೆಂಬಲ ವ್ಯಕ್ತವಾಗಿರುವುದು ಯುಪಿಎ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ.

ಸಶಕ್ತ ಲೋಕಪಾಲ ಮಸೂದೆ ಜಾರಿಗಾಗಿ, ಕಳೆದ ಆಗಸ್ಟ್ 16 ರಿಂದ ಅಣ್ಣಾ ಹಜಾರೆ ಆಮರಣ ನಿರಶನ ಕೈಗೊಂಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಪಾಲ ಮಸೂದೆ, ಭ್ರಷ್ಟಾಚಾರ ಮುಕ್ತ ಭಾರತ, ಅಣ್ಣಾ ಹಜಾರೆ