ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ: ಜನತೆಯ ಅಭಿಪ್ರಾಯಕ್ಕೆ ಸಂಸದೀಯ ಸಮಿತಿ ನಿರ್ಧಾರ (Lokpal Bill | Parliamentary Panel | Anna Hazare fast | Jan Lokpal)
PTI
ಭ್ರಷ್ಟಾಚಾರವನ್ನು ನಿಯಂತ್ರಿಸುವ ಲೋಕಪಾಲ ಮಸೂದೆಯ ಬಗ್ಗೆ ಸಾರ್ವಜನಿಕರ ಅನಿಸಿಕೆ ಹಾಗೂ ಸಲಹೆಗಳಿಗಾಗಿ 15 ದಿನಗಳ ಅವಕಾಶವನ್ನು ನೀಡಲು ಸಂಸದೀಯ ಸಮಿತಿ ನಿರ್ಧರಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಕಾನೂನು ಮತ್ತು ನ್ಯಾಯಾಂಗ ಹಾಗೂ ವೈಯಕ್ತಿಕ ವಿಭಾಗದ ಸಂಸದೀಯ ಸ್ಥಾಯಿ ಸಮಿತಿ, ದಿನಪತ್ರಿಕೆಗಳಲ್ಲಿ ಮಸೂದೆಯ ಬಗ್ಗೆ ಕೆಲ ವಿವರಣೆಗಳ ಜಾಹೀರಾತು ನೀಡಿದ್ದು, 15 ದಿನಗಳೊಳಗಾಗಿ ಸಾರ್ವಜನಿಕರು ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನೀಡಬಹುದು ಎಂದು ಪ್ರಕಟಿಸಿದೆ.

ಸಾರ್ವಜನಿಕರ, ಸಂಘ ಸಂಸ್ಥೆಗಳ ಅನಿಸಿಕೆಗಳು ಮತ್ತು ಸಲಹೆಗಳಿಗಾಗಿ 15 ದಿನಗಳ ಗಡುವು ನೀಡಿದ್ದರಿಂದ, ಸಂಸದೀಯ ಸ್ಥಾಯಿ ಸಮಿತಿ ತನ್ನ ಶಿಫಾರಸುಗಳನ್ನು ಮುಂಗಾರು ಅಧಿವೇಶನ ಅಂತ್ಯವಾಗುವ ಸೆಪ್ಟೆಂಬರ್ 8ರೊಳಗಾಗಿ ಸಂಸತ್ತಿನಲ್ಲಿ ಮಂಡಿಸಲು ಸಾಧ್ಯವಿಲ್ಲ ಎನ್ನುವ ಸೂಚನೆ ನೀಡಿದೆ.

ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ, ಸಂಸತ್ತಿನಲ್ಲಿ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಲು ಸರಕಾರಕ್ಕೆ ಆಗಸ್ಟ್ 30ರ ಗಡುವು ನೀಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಪಾಲ ಮಸೂದೆ, ಸಂಸದೀಯ ಸಮಿತಿ, ಅಣ್ಣಾ ಹಜಾರೆ ನಿರಶನ, ಜನಲೋಕಪಾಲ