ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಬಲ ಜನ ಲೋಕಪಾಲ ಬಿಲ್ ಜಾರಿಗೆ ಅಣ್ಣಾ ಬಣ ಪಟ್ಟು (Anna Hazare | Jan Lokpal Bill | Central Govt | Santosh Hegde)
ಜನಲೋಕಪಾಲ ಮಸೂದೆ ಜಾರಿಗಾಗಿ ಗಾಂಧಿವಾದಿ ಅಣ್ಣಾ ಹಜಾರೆ ಅವರು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆಸಿಕೊಂಡು ಬರುತ್ತಿರುವ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


ಒಂದೆಡೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜತೆ ಮಾತುಕತೆಗೆ ಸಿದ್ಧ ಎಂದಿರುವ ಕೇಂದ್ರ ಸರಕಾರ ಮಸೂದೆ ಜಾರಿ ಬಗ್ಗೆ ಹೆಚ್ಚಿನ ಕಾಲವಕಾಶ ಕೋರಿದೆ. ಆದರೆ ಇದಕ್ಕೆ ಜಗ್ಗದ ಅಣ್ಣಾ ಬಣ ಆಗಸ್ಟ್ 31ರ ಗಡುವು ನೀಡಿದೆ.

ದೇಶದ್ಯಾಂತ ಅಣ್ಣಾ ಉಪವಾಸಕ್ಕೆ ಬೆಂಬಲ ಸೂಚಿಸಿ ಹೋರಾಟದ ಕಿಚ್ಚು ಹೆಚ್ಚುತ್ತಲೇ ಇವೆ. ರಾಮಲೀಲಾ ಮೈದಾನದಲ್ಲಿ ಈಗಾಗಲೇ 1077 ಸತ್ಯಾಗ್ರಹಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದರಲ್ಲಿ 33 ಜನರು ಅಸ್ವಸ್ಥರಾಗಿ ಕಂಡುಬಂದಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ವಿಭಾಗ ತಿಳಿಸಿದೆ.

ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹಿಗಳ ಆರೋಗ್ಯ ತಪಾಸಣೆಗಾಗಿ ಚಿಕಿತ್ಸಾ ಶಿಬಿರವನ್ನು ತೆರೆಯಲಾಗಿದೆ. ತೀವ್ರ ಅಸ್ವಸ್ಥಗೊಂಡ ಹೋರಾಟಗಾರರನ್ನು ಸ್ಥಳೀಯ ಜಯಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.

ದೆಹಲಿಗೆ ಸಂತೋಷ್ ಹೆಗ್ಡೆ...
ಈ ನಡುವೆ ಮಾಜಿ ಲೋಕಾಯುಕ್ತ ಹಾಗೂ ನ್ಯಾಯವಾದಿ ಸಂತೋಷ್ ಹೆಗ್ಡೆ ಸಹ ಭಾನುವಾರ (ಇಂದು) ಮಧ್ಯಾಹ್ನದ ಹೊತ್ತಿಗೆ ನವದೆಹಲಿಗೆ ತೆರಳಿತ್ತಿದ್ದು, ಹಜಾರೆ ಜತೆ ಮಾತುಕತೆ ನಡೆಸಲಿದ್ದಾರೆ.

ಹಜಾರೆ ಆರೋಗ್ಯ ಸ್ಥಿರ...
ಕಳೆದ ಆರು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ಆರೋಗ್ಯ ಸಹ ನಿರಂತರ ಅಂತರಾಳದಲ್ಲಿ ತಪಾಸಣೆಗೊಳಪಡಿಸಲಾಗುತ್ತದೆ. ಅವರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಏರುಪೇರು ಆಗಿಲ್ಲ ಎಂದು ವೈದರು ತಿಳಿಸಿದ್ದಾರೆ.

ಆದರೆ ಮುಂದಿನ ದಿನಗಳಲ್ಲಿ ಅಣ್ಣಾ ಆರೋಗ್ಯ ಸಹ ಕೆಡಬಹುದೆಂಬ ಭೀತಿ ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಾಗಿ ಅಣ್ಣಾ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸರಕಾರ ಯಾವ ರೀತಿಯ ಸಂಧಾನಕ್ಕೆ ಮುಂದಾಗಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಫ್ರೀಡಂ ಪಾರ್ಕ್‌ನಲ್ಲೂ ಕುಂದದ ಹೋರಾಟ...
ಪ್ರಬಲ ಜನಲೋಕಪಾಲ್ ಬಿಲ್‌ ಬೆಂಬಲಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ ಹಲವು ಸಂಘಟನೆಗಳು ಸಾಥ್ ನೀಡುತ್ತಿವೆ. ಪ್ರಬಲ ಮಸೂದೆ ಜಾರಿ ಮಾಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಕಳೆದ ಆರು ದಿನಗಳಿಂದಲೂ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸತ್ಯಾಗ್ರಹಿಗಳು ತಿಳಿಸಿದ್ದಾರೆ. ಉದ್ಯೋಗಸ್ಥರು, ವ್ಯಾಪಾರಿಗಳು, ಹಿರಿಯ ಕಿರಿಯರು ಸೇರಿದಂತೆ ಎಲ್ಲ ವಿಭಾಗದ ಜನರು ಸಹ ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ, ಕೇಂದ್ರ ಸರಕಾರ, ಸಂತೋಷ್ ಹೆಗ್ಡೆ, ಫ್ರೀಡಂ ಪಾರ್ಕ್