ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ತಿನ ವರ್ಚಸ್ಸಿಗೆ ಧಕ್ಕೆ; ಅಣ್ಣಾ ಬಳಗಕ್ಕೆ ಕಾಂಗ್ರೆಸ್ ಟೀಕೆ (Anna Hazare | Congress | Central Govt | Jan Lokpal Bill)
ಸಂಸದೀಯ ಸ್ಥಾಯಿ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿರುವ ಗಾಂಧಿವಾದಿ ಅಣ್ಣಾ ಹಜಾರೆ ಬೆಂಬಲಿಗರನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸರಕಾರ, ಸಂಸತ್ತಿನ ವರ್ಚಸ್ಸಿಗೆ ಧಕ್ಕೆ ಮಾಡುವ ಯತ್ನ ನಡೆದಿದೆ ಎಂದು ಆಪಾದಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಂಸದೀಯ ಸ್ಥಾಯಿ ಸಮಿತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಂಸತ್ ಘನತೆಗೆ ಅಣ್ಣಾ ಬೆಂಬಲಿಗರು ಮಸಿ ಬಳಿದಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ವಿ. ನಾರಾಯಣ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಭ್ರಷ್ಟಚಾರ ವಿರುದ್ಧ ಸಶಕ್ತ ಜನಲೋಕಪಾಲ ವಿಧೇಯಕ ಜಾರಿ ಆಗ್ರಹಿಸಿ ನವದಹೆಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ರಾಗ್ರಹ ನಡೆಸುತ್ತಿದ್ದಾರೆ. ಈಗಾಗಲೇ ಗಾಂಧಿವಾದಿ ಅಣ್ಣಾ ಅವರ ಹೋರಾಟಕ್ಕೆ ದೇಶಾದ್ಯಂತ ಲಕ್ಷಾಂತರ ಮಂದಿ ಕೈ ಜೋಡಿಸಿದ್ದಾರೆ.

ಈ ನಡುವೆ ಲೋಕಾಪಾಲ ವಿಧೇಯಕ ಕುರಿತಂತೆ ಅಭಿಪ್ರಾಯ ನೀಡುವಂತೆ ಸಂಸದೀಯ ಸ್ಥಾಯಿ ಸಮಿತಿ ಕೋರಿತ್ತು. ಆದರೆ ಸಂಸದೀಯ ಸಮಿತಿಯನ್ನು ಹಜಾರೆ ಬೆಂಬಲಿರಗರು ತೀವ್ರ ಟೀಕೆ ನಡೆಸಿದ್ದರು. ಈ ವಿರುದ್ಧ ಸಿಡಿದೆದ್ದಿರುವ ನಾರಾಯಣ ಸ್ವಾಮಿ, ಇದು ಹುಕ್ಕುಚ್ಯುತಿಗೆ ಸಮಾನವಾಗಿದೆ ಎಂದರು.

ಸಂಸತ್ ಸದಸ್ಯರನ್ನು ಯಾರಾದರೂ 'ಕಳ್ಳ' ಎಂದು ನಿಂದಿಸಿದ್ದಲ್ಲಿ ಅದು ಸಂಸತ್ ಸದಸ್ಯರಿಗೂ ಮಾತ್ರವಲ್ಲ ಸಂಸತ್‌ ಘನತೆಗೂ ಮಸಿಬಳಿದಂತೆ ಎಂದವರು ಹೇಳಿದರು. ಸಂಸದೀಯ ಸ್ಥಾಯಿ ಸಮಿತಿಯು ಒಂದು ಮಿನಿ ಸಂಸತ್ ಮಾದರಿಯಲ್ಲಿ ರೂಪುಗೊಂಡಿದೆ. ಹೀಗಾಗಿ ಸಾಂವಿಧಾನಿಕ ಸಂಸ್ಥೆಗಳ ಬ್ಗಗೆ ಗೌರವದಿಂದ ವರ್ತಿಸಬೇಕು ಎಂದು ಅಣ್ಣಾ ಬಳಗಕ್ಕೆ ಕಿವಿಮಾತು ಹೇಳಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಕಾಂಗ್ರೆಸ್, ಕೇಂದ್ರ ಸರಕಾರ, ಜನಲೋಕಪಾಲ ಮಸೂದೆ