ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ವಿಧಿಸಿರುವ ಡೆಡ್‌ಲೈನ್ ಪ್ರಾಯೋಗಿಕವಲ್ಲ: ಸಿಂಘ್ವಿ (Lokpal Bill | Anna Hazare | Abhishek Singhvi | Central Govt)
ಸಶಕ್ತ ಜನಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಜಾರೆ ವಿಧಿಸಿರುವ ಡೆಡ್‌ಲೈನ್ ಪ್ರಾಯೋಗಿಕವಲ್ಲ ಎಂದು ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಲೋಕಪಾಲ ಬಿಲ್ ಪ್ರತಿ ನನ್ನ ಕೈ ಸೇರಿದೆ. ಇದನ್ನು ಕೂಲಂಕುಷವಾಗಿ ಅಧ್ಯಯನ ಮಾಡಲಾಗಿದೆ. ಸರಕಾರದ ವಿಧೇಯಕ ಹಾಗೂ ಜನ ಲೋಕಪಾಲ ಮಸೂದೆಗಳ ಉದ್ದೇಶ ಒಂದೇ ಆifದೆ. ಹೀಗಾಗಿ ಅಣ್ಣಾ ಹಜಾರೆ ನಡೆಸಿಕೊಂಡು ಬಂದಿರುವ ಸತ್ಯಾಗ್ರಹದ ಅಗತ್ಯವಿರಲಿಲ್ಲ ಎಂದಿದ್ದಾರೆ.

ಜನ ಲೋಕಪಾಲ ವಿಧೇಯಕ ಜಾರಿಗೆ ಸಂಬಂಧಿಸಿದಂತೆ ಆಗಸ್ಟ್ 31ರ ಗಡುವನ್ನು ಸರಕಾರಕ್ಕೆ ಅಣ್ಣಾ ಹಜಾರೆ ವಿಧಿಸಿದ್ದರು. ಆದರೆ ಈ ಪ್ರತಿಕ್ರಿಯಿಸಿರುವ ಸಿಂಘ್ವಿ ಹಜಾರೆ ವಿಧಿಸಿರುವ ಡೆಡ್ ಲೈನ್ ಪ್ರಾಯೋಗಿಕವಲ್ಲ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಯಾವುದೇ ತರಹದ ಭಿನ್ನಮತವಿಲ್ಲ ಎಂದವರು ಸಿಂಘ್ವಿ ಸ್ಪಷ್ಟಪಡಿಸಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಭಿಷೇಕ್ ಸಿಂಘ್ವಿ, ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ, ಕೇಂದ್ರ ಸರಕಾರ