ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚರ್ಚೆಗೆ ಸಿದ್ಧ, ಜವಾಬ್ದಾರಿಯುತ ಪ್ರತಿನಿಧಿ ಬರಲಿ: ಅಣ್ಣಾ ಹಜಾರೆ (Anna Hazare | Rahul Gandhi | jan lokpal bill | Manmohan Singh)
ಚರ್ಚೆಗೆ ಸಿದ್ಧ, ಜವಾಬ್ದಾರಿಯುತ ಪ್ರತಿನಿಧಿ ಬರಲಿ: ಅಣ್ಣಾ ಹಜಾರೆ
ನವದೆಹಲಿ, ಮಂಗಳವಾರ, 23 ಆಗಸ್ಟ್ 2011( 09:47 IST )
ಲೋಕಪಾಲ ಮಸೂದೆ ಬಿಕ್ಕಟ್ಟು ಪರಿಹಾರಕ್ಕೆ ಸರಕಾರದ ಜತೆ ಮಾತುಕತೆಗೆ ಸಿದ್ಧ ಎಂದು ಹೇಳಿರುವ ಗಾಂಧಿವಾದಿ ಅಣ್ಣಾ ಹಜಾರೆ, ತಾವು ಪ್ರಧಾನ ಮಂತ್ರಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಹಿರಿಯ ಸಚಿವರು ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತ್ರ ಮಾತುಕತೆಗೆ ಸಿದ್ಧ ಎಂದಿದ್ದಾರೆ.
ಸಶಕ್ತ ಜನಲೋಕಪಾಲ ವಿಧೇಯಕ ಜಾರಿ ಆಗ್ರಹಿಸಿ ಅಣ್ಣಾ ನಡೆಸಿಕೊಂಡು ಬಂದಿರುವ ಸತ್ಯಾಗ್ರಹ ಮಂಗಳವಾರ ಎಂಟನೇ ದಿನಕ್ಕೆ ಕಾಲಿರಿಸಿದೆ. ಇದರಂತೆ ಅಣ್ಣಾಜಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸಾವಿರಾರು ಜನರು ರಾಮಲೀಲಾ ಮೈದಾನಕ್ಕೆ ಬರುತ್ತಿದ್ದಾರೆ.
ಜನಲೋಕಪಾಲ ಮಸೂದೆ ಬಗ್ಗೆ ಚರ್ಚಿಸಲು ಸರಕಾರವು ಮುಂದೆ ಬರಲಿ. ಪ್ರಧಾನಿ ತನ್ನ ಪ್ರತಿನಿಧಿಗಳನ್ನು ಕಳುಹಿಸಲಿ. ಆದರೆ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಕೇಂದ್ರದ ಹಿರಿಯ ಸಚಿವರು ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಜತೆ ಮಾತ್ರ ಚರ್ಚೆಗೆ ಸಿದ್ಧ ಎಂದಿದ್ದಾರೆ.
ಲೋಕಪಾಲ ಮಸೂದೆ ಸಂಬಂಧ ಸರ್ಕಾರೇತರ ಸಂಸ್ಥೆ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಇದುವರೆಗೆ ಸರಕಾರದಿಂದ ಯಾವುದೇ ಸಂಧಾನಕಾರರು ತಮ್ಮನ್ನು ಭೇಟಿ ಮಾಡಿಲ್ಲ ಎಂದರು.
ಲೋಕಸಭೆಯಲ್ಲಿ ಮಂಡಿಸಿರುವ ಲೋಕಪಾಲ ಮಸೂದೆ ದುರ್ಬಲವಾಗಿದ್ದು, ಅದರಿಂದ ಭ್ರಷ್ಟಾಚಾರವನ್ನು ತೂಲಗಿಸಲು ಸಾಧ್ಯವಿಲ್ಲ. ಹೀಗಾಗಿ ಸರಕಾರ ಕೂಡಲೇ ಅದನ್ನು ವಾಪಾಸ್ ಪಡೆಯಬೇಕು ಎಂದರು.