ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಮ್ಯಾಜಿಕ್: 22 ಮಕ್ಕಳಿಗೆ 'ಅಣ್ಣಾ' ಹೆಸರು ನಾಮಕರಣ (Anna hazare | Madhya pradesh | Children | Protest | Corruption)
PTI
ಅಣ್ಣಾ ಫೇವರ್ ಅಥವಾ ಅಣ್ಣಾ ಮೇನಿಯಾ ಅಂತಾನೂ ಕರೆಯಬಹುದು. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಇತ್ತೀಚೆಗೆ ಜನ್ಮತಾಳಿದ 22 ಮಕ್ಕಳಿಗೆ ಭ್ರಷ್ಟಚಾರದ ವಿರುದ್ಧ ಹೋರಾಡುತ್ತಿರುವ ಹಿರಿಯ ಗಾಂಧಿವಾದಿ 'ಅಣ್ಣಾ' ಹೆಸರನ್ನು ನಾಮಕರಣ ಮಾಡಲಾಗಿದೆ.

ಬುಂದೇಲ್‌ಖಾಂಡ್‌ನ ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಲಾಗಿರುವ ದಾಮೋಹ್ ನಗರದ ಆಸ್ಪತ್ರೆಯಲ್ಲಿ ಆಗಸ್ಟ್ 16- 22ರವರೆಗೆ 18 ಗಂಡುಮಗು ಮತ್ತು 4 ಹೆಣ್ಣುಮಗು ಜನಿಸಿದ್ದು, ಮಕ್ಕಳಿಗೆ 'ಅಣ್ಣಾ' ಎಂದು ಹೆಸರಿಡಲಾಗಿದೆ.

ದಾಮೋಹ್‌ ಜಿಲ್ಲೆಯ ಪಠಾರಿಯಾ ನಗರದ ನಿವಾಸಿಯಾಗಿರುವ ಸಂಜಯ್ ಪಟೇಲ್ ಮಾತನಾಡಿ, ಕಳೆದ ವರ್ಷ ನನ್ನ ಪತ್ನಿ ಮಗುವಿಗೆ ಜನ್ಮನೀಡಿದಾಗ, ಆಸ್ಪತ್ರೆಯ ಸಿಬ್ಬಂದಿ 500 ರೂಪಾಯಿಗಳ ಲಂಚವನ್ನು ಕೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ, ನನ್ನ ಸಹೋದರನ ಪತ್ನಿ ಪ್ರಸಕ್ತ ವಾರದಲ್ಲಿ ಮಗುವಿಗೆ ಜನ್ಮನೀಡಿದ್ದಾಳೆ. ಅಣ್ಣಾ ಹೋರಾಟದ ಫಲವಾಗಿ ಯಾರೋಬ್ಬರು ಒಂದು ನಯಾ ಪೈಸೆ ಲಂಚದ ಹಣ ಕೇಳಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟದ ನೂತನ ಆಶಾಕಿರಣವನ್ನು ತಂದಿರುವ ಅಣ್ಣಾ ಹಜಾರೆಯವರಂತೆ, ನನ್ನ ಮಗು ಕೂಡಾ ಬೆಳೆಯಬೇಕು ಎಂದು ಮಗುವಿಗೆ 'ಅಣ್ಣಾ' ಹೆಸರನ್ನು ನಾಮಕರಣ ಮಾಡಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಮಧ್ಯಪ್ರದೇಶ, ಮಕ್ಕಳು, ಪ್ರತಿಭಟನೆ, ಭ್ರಷ್ಟಾಚಾರ