ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ಮೇಲೆ ವೈಯಕ್ತಿಕ ಆರೋಪ ಮಾಡ್ಬೇಡ್ರಪ್ಪಾ: ಪ್ರಧಾನಿ ನುಡಿ (Lokpal Bill row | Anna Hazare | Corruption | Prime Minister | Kiranbedi | Fast)
PTI
ಭ್ರಷ್ಟಾಚಾರದ ಬಗ್ಗೆ ಲೋಕಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿ, ಭ್ರಷ್ಟಾಚಾರ ತಡೆಗೆ ಸರಕಾರ ಸಂಪೂರ್ಣ ಬದ್ಧವಾಗಿದ್ದು, ನಿರಶನ ಕೈಬಿಡುವಂತೆ ಅಣ್ಣಾ ಹಜಾರೆಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳು ಕೀಳು ಭಾಷೆ ಪ್ರಯೋಗಿಸಿ ವೈಯಕ್ತಿಕವಾಗಿ ತನ್ನ ಮೇಲೆ ಆರೋಪ ಮಾಡುತ್ತಿದ್ದು ತನ್ನನ್ನು ಭ್ರಷ್ಟ ಎಂಬಂತೆ ಬಿಂಬಿಸುತ್ತಿವೆ ಎಂದು ಟೀಕಿಸಿದ ಅವರು, ಬೇಕಿದ್ದರೆ ತನ್ನ ಆಸ್ತಿಪಾಸ್ತಿಯ ತನಿಖೆ ನಡೆಸಬಹುದು ಎಂದೂ ಹೇಳಿದ್ದಾರೆ.

ಪ್ರಧಾನಿಯ ಈ ಹೇಳಿಕೆಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ ಬಣದ ಕಿರಣ್ ಬೇಡಿ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಪ್ರಧಾನಿಯವರು ವೈಯಕ್ತಿಕ ಎಂದು ಪರಿಗಣಿಸುತ್ತಿದ್ದಾರೆ. ಪ್ರಧಾನಿ ಹುದ್ದೆಯಲ್ಲಿ ಮನಮೋಹನ್ ಸಿಂಗ್ ಇದ್ದಾರೆ. ಪ್ರಧಾನಿ ಕಚೇರಿ ತೆಗೆದುಕೊಳ್ಳುವ ಎಲ್ಲಾ ರೀತಿಯ ನಿರ್ಣಯಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದ್ದಾರೆ.

ಇದಲ್ಲದೆ, ಎಲ್ಲ ಲೋಕಪಾಲ ಕರಡು ಮಸೂದೆಗಳನ್ನು ಕೂಡ ಲೋಕಸಭೆಯಲ್ಲಿ ಚರ್ಚಿಸಿ, ಅದರ ದೌರ್ಬಲ್ಯಗಳು, ಪ್ರಾಬಲ್ಯಗಳನ್ನು ಕ್ರೋಡೀಕರಿಸಿ, ಬಲಿಷ್ಠ ಕಾಯ್ದೆ ರೂಪಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದಿರುವ ಪ್ರಧಾನಿ, ಅಣ್ಣಾ ಅವರ ಜನ ಲೋಕಪಾಲ ಕರಡು ಮಸೂದೆಯನ್ನು ಕೂಡ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಹಿರಿಯ ಗಾಂಧಿವಾದಿ ಸಮಾಜ ಸುಧಾರಕ ಅಣ್ಣಾ ಹಜಾರೆಯವರ ಸಿದ್ಧಾಂತಗಳನ್ನು ಗೌರವಿಸುತ್ತೇನೆ. ಭ್ರಷ್ಟಾಚಾರದಿಂದ ನೊಂದ ಜನತೆಗೆ ಹಜಾರೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಜನಲೋಕಪಾಲ ಮಸೂದೆಯ ಅಂಶಗಳನ್ನು ಪರಿಗಣಿಸುವ ಭರವಸೆ ನೀಡುವುದಾಗಿ ಪ್ರಧಾನಿ ತಿಳಿಸಿದ್ದಾರೆ.


ಲೋಕಸಭೆಯಲ್ಲಿ ಪ್ರಧಾನಿ ಮಾಡಿದ ಭಾಷಣದ ಮುಖ್ಯಾಂಶಗಳು ಇಂತಿವೆ:

*ಭ್ರಷ್ಟಾಚಾರ ತಡೆಗಾಗಿ ಎಲ್ಲಾ ರಾಜಕಾರಣಿಗಳು ಒಂದಾಗಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ.

* ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ಸರಕಾರ ಸಂಪೂರ್ಣವಾಗಿ ಶ್ರಮಿಸುತ್ತದೆ ಎಂದು ಸಂಸತ್ತಿಗೆ ಭರವಸೆ ನೀಡಿದ್ದಾರೆ.

* ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಷಿ, ನಾನೇ ಭ್ರಷ್ಟ ವ್ಯಕ್ತಿ ಎನ್ನುವಂತೆ ವೈಯಕ್ತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ.

*ಕೆಲ ಸಹದ್ಯೋಗಿಗಳ ಭ್ರಷ್ಟಾಚಾರಕ್ಕೆ ನಾನು ಕುಮ್ಮಕ್ಕು ನೀಡಿದ್ದೇನೆ ಎನ್ನುವ ರೀತಿ ಆರೋಪಿಸುವುದು ಸರಿಯಲ್ಲ.

*ಕಳೆದ ಏಳು ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಲವಾರು ಬಾರಿ ವಿರೋಧಪಕ್ಷಗಳು ನನ್ನ ವಿರುದ್ಧ ಆರೋಪಗಳನ್ನು ಮಾಡಿವೆ. ಆದರೆ, ನಾನು ಯಾವತ್ತು ಕೆಟ್ಟಪದಗಳನ್ನು ಇಲ್ಲಿಯವರೆಗೆ ಬಳಸಿಲ್ಲ.

*ದೇಶಕ್ಕಾಗಿ ಸೇವೆಯನ್ನು ನೀಡುತ್ತಿರುವ ಸಾರ್ವಜನಿಕ ಜೀವನದಲ್ಲಿದ್ದೇನೆ ಎಂದು ಭಾವಿಸುತ್ತೇನೆ.

*ಕಳೆದ 20 ವರ್ಷಗಳಿಂದ ಸಂಸತ್ತಿನಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆಯನ್ನು ನೀಡುತ್ತಿದ್ದೇನೆ.

* ವಿಶ್ವದ ಬೃಹತ್ ಆರ್ಥಿಕ ರಾಷ್ಟ್ರಗಳಲ್ಲಿ ಸ್ಥಾನ ಪಡೆಯುತ್ತಿರುವ ಭಾರತದ ವಿತ್ತಸಚಿವನಾಗಿ ಸೇವೆ ಸಲ್ಲಿಸಿದ್ದೇನೆ.

* ದೇಶಧ ಬಲಿಷ್ಠ ಆರ್ಥಿಕತೆಯಿಂದಾಗಿ ವಿಶ್ವದಾದ್ಯಂತ ಗೌರವ ಪಡೆದಿದೆ.

* ವಿಪಕ್ಷಗಳ ಆರೋಪಗಳಿಂದ ನನಗೆ ನೋವಾಗಿದೆ. ಆದರೆ, ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗಿಸುವುದಿಲ್ಲ.

* ನಾವು ದುಷ್ಟ ಉದ್ದೇಶಗಳನ್ನು ಹೊಂದಿದ್ದೇವೆ ಎಂದು ಆರೋಪಿಸಲಾಗಿದೆ.

* ಲೋಕಪಾಲ ಕರಡು ಕುರಿತಂತೆ ಒಪ್ಪಂದ ಏರ್ಪಟ್ಟಿದೆ.

* ಅಣ್ಣಾ ಹಜಾರೆಯವರ ಜನಲೋಕಪಾಲ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಗಣಿಸಲಿದೆ.

* ಲೋಕಸಭೆಯ ಎಲ್ಲಾ ಸದಸ್ಯರು ಕೂಡಾ ಅಣ್ಣಾ ಮನವಲಿಸಬೇಕು.

* ಹಜಾರೆ ಸಿದ್ಧಾಂತಗಳನ್ನು ಗೌರವಿಸುತ್ತೇನೆ.

* ಭ್ರಷ್ಟಾಚಾರ ಮತ್ತು ಜನಸಾಮಾನ್ಯರ ಕಳವಳದ ಸಾಕಾರ ಮೂರ್ತಿಯಾಗಿದ್ದಾರೆ.

* ನಾನು ಹಜಾರೆಯವರನ್ನು ಪ್ರಶಂಸಿಸುತ್ತೇನೆ. ಹಾಗೂ ಅವರನ್ನು ಅಭಿನಂದಿಸುತ್ತೇನೆ.

* ಹಜಾರೆಯವರ ಜೀವನ ಮಹತ್ವದ್ದಾಗಿದೆ.

* ಜನಲೋಕಪಾಲ ಮಸೂದೆ, ಸರಕಾರಿ ಲೋಕಪಾಲ ಮಸೂದೆ ಮತ್ತು ಅರುಣಾ ರಾಯ್ ಮಸೂದೆಯ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

* ಸಶಕ್ತ ಲೋಕಪಾಲ ಮಸೂದೆ ಜಾರಿಗಾಗಿ ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಆಲಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಪಾಲ ವಿವಾದ, ಅಣ್ಣಾ ಹಜಾರೆ, ಭ್ರಷ್ಟಾಚಾರ, ಪ್ರಧಾನ ಮಂತ್ರಿ, ಕಿರಣ್ ಬೇಡಿ, ನಿರಶನ