ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ನಿರಶನದಿಂದ ಕಳವಳವಾಗಿದೆ: ರಾಹುಲ್ (Rahul Gandhi | Anna Crisis | Corruption | Lokpal issue | Anna Hazare)
ಅಣ್ಣಾ ಹಜಾರೆ ನಿರಶನದಿಂದ ಕಳವಳವಾಗಿದೆ: ರಾಹುಲ್
ನವದೆಹಲಿ, ಶುಕ್ರವಾರ, 26 ಆಗಸ್ಟ್ 2011( 17:39 IST )
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ನಿರಶನ ಕಳವಳ ಮೂಡಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.
ಹೌದು, ಲೋಕಪಾಲ ಮಸೂದೆ ಹಾಗೂ ಅಣ್ಣಾ ಹಜಾರೆ ನಿರಶನ ಅಂತ್ಯಗೊಳಿಸದಿರುವುದು ನಿಜವಾಗಿಯೂ ಆತಂಕಕ್ಕೆ ಕಾರಣವಾಗಿದೆ ಎಂದು ರಾಹುಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ ಕಾಂಗ್ರೆಸ್ ಪಕ್ಷದ ಸಂಸದೀಯ ಸಭೆಯಲ್ಲಿ, ಹಜಾರೆ ನಿಲುವಿನ ಬಗ್ಗೆ ಪಕ್ಷದ ನಾಯಕರಿಗೆ ವಿವರಣೆ ನೀಡಿದರು. ಸಭೆಯ ನಂತರ ಪ್ರಣಬ್ ಮುಖರ್ಜಿಯವರೊಂದಿಗೆ ಹೊರಬಂದ ರಾಹುಲ್ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಂಸದೀಯ ಸಭೆಯಲ್ಲಿ ರಾಹುಲ್ ಮೌನವಾಗಿದ್ದರು. ಪಕ್ಷದ ಇತರ ಸಂಸದರು ಹಾಗೂ ಯುವ ನಾಯಕರು ಪ್ರಣಬ್ ಎದುರಿಗೆ ಕೆಲ ಸಲಹೆಗಳು ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಅಣ್ಣಾ ಹಜಾರೆಯವರ ಬಗ್ಗೆ ಆರಂಭದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳ ವಿರುದ್ಧ ಕೆಲ ಪಕ್ಷದ ಸದಸ್ಯರು ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು.