ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರಕಾರ ಯು-ಟರ್ನ್: ಇಂದು ಜನಲೋಕಪಾಲ ಚರ್ಚೆಯಿಲ್ಲ (Pawan Kumar Bansal | Lokpal Bill | Jan Lokpal Bill | Corruption | Anna Hazare)
PTI
ನವದೆಹಲಿ: ಲೋಕಸಭೆಯ ಕಲಾಪದಲ್ಲಿ ಬಹುನಿರೀಕ್ಷಿತ ಜನಲೋಕಪಾಲ ಮಸೂದೆ ಚರ್ಚೆ ನಡೆಯುವ ಸಾಧ್ಯತೆಗಳಿಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ. ಪ್ರಧಾನಿಯೇ ಸ್ವತಃ ಗುರುವಾರವಷ್ಟೇ ಸಂಸತ್ತಿನಲ್ಲಿ ಭರವಸೆ ನೀಡಿ, ಜನ ಲೋಕಪಾಲ, ಸರಕಾರಿ ಲೋಕಪಾಲ ಮತ್ತು ಇನ್ನೊಂದು ಅರುಣಾ ರಾಯ್ ಮಂಡಿಸಿದ ಲೋಕಪಾಲ- ಮೂರೂ ಕರಡು ಮಸೂದೆಗಳನ್ನು ಚರ್ಚಿಸುತ್ತೇವೆ ಎಂದು ಹೇಳಿದ ಬೆನ್ನಿಗೇ ಅವರ ಸಂಪುಟದ ಸಚಿವರೇ ಈಗ ಕೇವಲ 12 ಗಂಟೆಗಳೊಳಗೆ ಹೇಳಿಕೆ ಬದಲಾಯಿಸಿರುವುದು ಅಚ್ಚರಿ ಮೂಡಿಸಿದ್ದು, ನಿಜಕ್ಕೂ ಸರಕಾರ ಯಾರ ಕೈಯಲ್ಲಿದೆ ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಾಲ್, ಜನಲೋಕಪಾಲ ಮಸೂದೆ ಚರ್ಚೆಗಾಗಿ ನೋಟಿಸ್ ನೀಡಲಾಗಿಲ್ಲವಾದ್ದರಿಂದ ಇಂದಿನ ಕಲಾಪದಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ.

ಇಂದಿನ ಸಂಸತ್ತಿನ ಕಲಾಪದಲ್ಲಿ ಜನಲೋಕಪಾಲ ಮಸೂದೆಯ ಚರ್ಚೆಯ ಬಗ್ಗೆ ಉಲ್ಲೇಖಿಸಿಲ್ಲ.ಸಂಸತ್ತಿನ ನಿಯಮಾವಳಿ ಪ್ರಕಾರ ಅಜೆಂಡಾದಲ್ಲಿರುವ ವಿಷಯಗಳನ್ನು ಮಾತ್ರ ಸದನದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ಬನ್ಸಾಲ್ ಹೇಳಿದ್ದಾರೆ.

ಏತನ್ಮಧ್ಯೆ, ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆಯ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆ ಬಗ್ಗೆ ಚರ್ಚಿಸಲು ಅಗತ್ಯವಾದ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಸಚಿವ ಪವನ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪವನ್ ಕುಮಾರ್ ಬನ್ಸಾಲ್, ಲೋಕಪಾಲ ಮಸೂದೆ, ಜನಲೋಕಪಾಲ, ಭ್ರಷ್ಟಾಚಾರ, ಅಣ್ಣಾ ಹಜಾರೆ