ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ: ಚಿದು ವಿರುದ್ಧ ನ್ಯಾಯಾಲಯದಲ್ಲಿ ಸ್ವಾಮಿ ವಾದ (Subramanian Swamy | 2G Case | P Chidambaram | Delhi court | CBI inquiry)
2ಜಿ: ಚಿದು ವಿರುದ್ಧ ನ್ಯಾಯಾಲಯದಲ್ಲಿ ಸ್ವಾಮಿ ವಾದ
ನವದೆಹಲಿ, ಶುಕ್ರವಾರ, 26 ಆಗಸ್ಟ್ 2011( 16:04 IST )
PTI
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಲು ಜನತಾ ಪಕ್ಷದ ಅಧ್ಯಕ್ಷ ಸುಬ್ರಹಮಣ್ಯಂ ಸ್ವಾಮಿಯವರಿಗೆ ದೆಹಲಿ ಕೋರ್ಟ್ ಅನುಮತಿ ನೀಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಚಿದಂಬರಂ ವಿರುದ್ಧದ ತಮ್ಮ ಪ್ರಕರಣದಲ್ಲಿ ವಾದವನ್ನು ಮಾಡಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಬೇಕು ಎಂದು ನ್ಯಾಯಾಲಯಕ್ಕೆ ಸ್ವಾಮಿ ಕೋರಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ನೆನೆಗುದಿಯಲ್ಲಿರುವ 2ಜಿ ಹಗರಣದಲ್ಲಿ ಅಂದಿನ ವಿತ್ತಸಚಿವ ಪಿ.ಚಿದಂಬರಂ ಆರೋಪಿಯಾಗಿದ್ದಾರೆ ಎನ್ನುವ ದೂರು ದಾಖಲಿಸಲು ಕೋರ್ಟ್ ಸ್ವಾಮಿಯವರಿಗೆ ಕಾಲಾವಕಾಶ ಕೂಡಾ ನೀಡಿದೆ.
2ಜಿ ಹಗರಣದಲ್ಲಿ ಅಂದಿನ ವಿತ್ತಸಚಿವ ಪಿ.ಚಿದಂಬರಂ ಪಾತ್ರದ ಬಗ್ಗೆ ಸಿಬಿಐಗೆ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎನ್ನುವ ದೂರು ಸುಪ್ರೀಂಕೋರ್ಟ್‌ನಲ್ಲಿ ನೆನೆಗುದಿಯಲ್ಲಿದ್ದು, ಆದೇಶಕ್ಕಾಗಿ ಕಾಯುತ್ತಿದ್ದೇನೆ. 2ಜಿ ಹಗರಣದಲ್ಲಿ ಚಿದಂಬರಂ ಆರೋಪಿಯಾಗಿದ್ದಾರೆ ಎನ್ನುವ ದೂರು ದಾಖಲಿಸಲು ನ್ಯಾಯಾಲಯಕ್ಕೆ ಆಗಮಿಸಿರುವುದಾಗಿ ಸಿಬಿಐ ವಿಶೇಷ ನ್ಯಾಯಾಧೀಶ ಒಪಿ ಸೈಯಾನಿಯವರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಅಂದಿನ ವಿತ್ತಸಚಿವ ಪಿ.ಚಿದಬಂರಂ ಹಾಗೂ ಅಂದಿನ ಟೆಲಿಕಾಂ ಸಚಿವ ಎ.ರಾಜಾ ಜಂಟಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ, 2ಜಿ ಹಗರಣ ತನಿಖೆ ನಡೆಸುತ್ತಿರುವ ಸಿಬಿಐ, ಕೇವಲ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರನ್ನು ಸಂಪೂರ್ಣ ಹೊಣೆಯನ್ನಾಗಿಸಿದೆ ಎಂದು ಸುಬ್ರಹಮಣ್ಯಂ ಸ್ವಾಮಿ ಕಿಡಿಕಾರಿದ್ದಾರೆ.