ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೀಟಲೆ ಅಥವಾ ಸಂಚು? ಕಪಿಲ್ ಸಿಬಲ್‌ಗೆ 1 ಲಕ್ಷ ರೂ. ಲಂಚದ ಹಣ ರವಾನೆ (Bribe cheque | Kapil Sibal | Jan Lokpal Bill l |Delhi Police | Central University of Jharkhand | Latest News in Kannada | Latest India News)
PTI
ಜಾರ್ಖಂಡ್ ರಾಜ್ಯದಲ್ಲಿರುವ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ರಿಜಿಸ್ಟ್ರಾರ್ ಹುದ್ದೆಗೆ ನೇಮಕ ಮಾಡುವಂತೆ ವ್ಯಕ್ತಿಯೊಬ್ಬರು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್‌ಗೆ 1 ಲಕ್ಷ ರೂಪಾಯಿ ಮೌಲ್ಯದ ಲಂಚದ ಚೆಕ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಅವರಿಗೆ 1ಲಕ್ಷ ರೂಪಾಯಿ ಲಂಚದ ಚೆಕ್ ಕಳುಹಿಸಿರುವ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಆರೋಪಿಯ ವಿರುದ್ಧ ಭ್ರಷ್ಟಚಾರ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಳೆದ ಮಂಗಳವಾರದಂದು ಮಾನವ ಸಂಪನ್ಮೂಲ ಖಾತೆ ಸಚಿವಾಲಯಕ್ಕೆ ಸಚಿವ ಸಿಬಲ್ ಅವರ ಹೆಸರಿನಲ್ಲಿ ಲಕೋಟೆ ಬಂದಿದ್ದು, ಲಕೋಟೆಯಲ್ಲಿ 1 ಲಕ್ಷ ರೂಪಾಯಿ ಚೆಕ್‌ನೊಂದಿಗೆ ಪತ್ರವೊಂದನ್ನು ಲಗತ್ತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಂಚಿಯ ದ್ರುವಾ ಜಿಲ್ಲೆಯ ಒಂಪ್ರಕಾಶ್ ಎನ್ನುವ ವ್ಯಕ್ತಿಯೊಬ್ಬರು ಸೆಂಟ್ರಲ್ ಯುನಿವರ್ಸಿಟಿ ಆಫ್ ಜಾರ್ಖಂಡ್‌ನಲ್ಲಿ ಖಾಲಿಯರುವ ರಿಜಿಸ್ಟ್ರಾರ್ ಅಥವಾ ಉಪರಿಜಿಸ್ಟ್ರಾರ್ ಹುದ್ದೆಗೆ ನೇಮಕ ಮಾಡುವಂತೆ ಒತ್ತಾಯಿಸಿ, ಕೆನರಾ ಬ್ಯಾಂಕ್‌ನ 1 ಲಕ್ಷ ರೂಪಾಯಿ ಮೌಲ್ಯದ ಚೆಕ್‌ನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಿದ್ದರು.

ಆರೋಪಿಯ ವಿರುದ್ಧ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಅಮಿತ್ ಖಾರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕಪಿಲ್ ಸಿಬಲ್, ಜನಲೋಕಪಾಲ ಮಸೂದೆ, ದೆಹಲಿ ಪೊಲೀಸ್, ಸೆಂಟ್ರಲ್ ಯುನಿವರ್ಸಿಟಿ ಆಫ್ ಜಾರ್ಖಂಡ್, ಲಂಚದ ಟೆಕ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ