ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಹೋರಾಟದ ಫಲ: ಸರ್ಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಜಾರಿ (Anna hazare | Corruption | Lokpal bill | Government office | Latest News in Kannada | Latest India News)
PTI
ಸಶಕ್ತ ಲೋಕಪಾಲಕ್ಕಾಗಿ ಹಜಾರೆ ಉಪವಾಸ ನಡೆಸುತ್ತಿದ್ದ ವೇಳೆ ಸರ್ಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಜಾರಿಗೆ ಬರಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದರು. ಇದೀಗ, ಆರಂಭಿಕ ಹಂತವಾಗಿ ಸೆಪ್ಟೆಂಬರ್ 15 ರಿಂದ ದೆಹೆಲಿಯ ಸರ್ಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಜಾರಿಗೆ ಬಂದಿದೆ.

ದೆಹಲಿ ಪ್ರಜೆಗೆ ನಿಗದಿತ ಅವಧಿಯಲ್ಲಿ ಸೇವೆ ಉಪಲಬ್ದತೆ ಕಾಯ್ದೆಯನ್ವಯ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರದ ವತಿಯಿಂದ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳನ್ನು ಮತ್ತಷ್ಟು ಉತ್ತಮವಾಗಿ ನೀಡಲು ಈ ಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ, ಆಹಾರ ಮತ್ತು ನಾಗರಿಕ ಪೂರೈಕೆ, ಸಾರಿಗೆ, ವ್ಯಾಪಾರ ಮತ್ತು ತೆರಿಗೆ, ನವದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಕಚೇರಿಗಳಲ್ಲಿ ನಾಗರಿಕ ಸನ್ನದು ಜಾರಿಗೆ ಬಂದಿದೆ.

ಒಂದು ವೇಳೆ ನಿಗದಿತ ಸಮಯದಲ್ಲಿ ಸೇವೆ ಒದಗಿಸುವಲ್ಲಿ ವಿಫಲರಾದಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗೆ ದಿನಕ್ಕೆ 10 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ನಿಗದಿತ ಸೇವೆ ನೀಡದಿದ್ದಲ್ಲಿ 5 ಸಾವಿರ ರೂಪಾಯಿಗಳವರೆಗೂ ದಂಡ ವಿಧಿಸುವ ಅಧಿಕಾರವಿದೆ.

ದಂಡವನ್ನು ನಿಗದಿ ಮಾಡುವ ಬಗ್ಗೆ ಒಂ ದು ಸಮಿತಿಯನ್ನೂ ರಚನೆ ಮಾಡುವ ಬಗ್ಗೆ ಕಾಯ್ದೆಯಲ್ಲಿ ಪ್ರಸ್ತಾಪವಿದೆ. ಸೇವೆಗೆ ಬೇಡಿಕೆ ಸಲ್ಲಿಸಿದ 45 ದಿನಗಳೊಳಗೆ ಅದನ್ನು ಸಂಬಂಧಿತ ಇಲಾಖೆ ಜಾರಿಗೊಳಿಸಬೇಕು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಭ್ರಷ್ಟಾಚಾರ, ನಾದರಿಕ ಸನ್ನದು, ಲೋಕಪಾಲ ಮಸೂದೆ, ಸರಕಾರ, ಕಚೇರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ