ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್‌ಗೆ ಪ್ರಧಾನಿ ಪಟ್ಟ ತಪ್ಪಿಸಲು ಸಿಬಲ್, ಚಿದು ಸಂಚು: ಅರೋನ್ (Manmohan sing | Rahul gandhi | Praveen sing arone | Anna hazare | Government, Latest Politics News in Kannada | Latest India News)
PTI
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಪ್ರತಿಷ್ಠೆಗೆ ಮಸಿ ಬಳೆಯುವ ಮತ್ತು ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗುವುದನ್ನು ತಪ್ಪಿಸುವ ದುರುದ್ದೇಶದಿಂದಲೇ ಅಣ್ಣಾ ಹಜಾರೆ ಅವರ ಹೋರಾಟವನ್ನು ಸಚಿವರಾದ ಕಪಿಲ್ ಸಿಬಲ್, ಪಿ.ಚಿದಂಬರಂ ಸರಿಯಾಗಿ ನಿಭಾಯಿಸಲಿಲ್ಲ ಎಂದು ಬರೇಲಿಯ ಯುವ ಕಾಂಗ್ರೆಸ್ ಸಂಸದ ಪ್ರವೀಣ್ ಸಿಂಗ್ ಅರೋನ್ ಆರೋಪಿಸಿದ್ದಾರೆ.

ರಾಹುಲ್ ಅವರಿಗೆ ಬರೆದ ಪತ್ರದಲ್ಲಿ ನೇರವಾಗಿ ಈ ಆರೋಪ ಮಾಡಿರುವ ಅರೋನ್, ಆರಂಭದಿಂದಲೇ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಉದ್ದೇಶಪೂರ್ವಕವಾಗಿ ಸಚಿವರು ಎಡವಿದ್ದಾರೆ ಎಂದಿದ್ದಾರೆ.

ಈ ವೈಫಲ್ಯಕ್ಕೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರತ್ತ ಬೆರಳು ತೋರಿದ್ದಾರೆ. ಸೋನಿಯಾ ಹಾಗೂ ರಾಹುಲ್ ಅನುಪಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಹೊಣೆಹೊತ್ತ ಕಾಂಗ್ರೆಸ್ ನಾಯಕರು ಜನಸಾಮನ್ಯರ ಮನಃಸ್ಥಿತಿ ಹಾಗೂ ಅಣ್ಣಾ ಹೋರಾಟದ ಸಾಮಾಜಿಕ- ರಾಜಕೀಯ ಆಯಾಮಗಳನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ.

ರಾಜಕೀಯ ದೂರದೃಷ್ಟಿಯ ಕೊರತೆ ಹಾಗೂ ಕೇವಲ ತಾಂತ್ರಿಕ, ಕಾನೂನಾತ್ಮಕ ಅಂಶಗಳ ದೃಷ್ಟಿಯಿಂದ ಮಾತ್ರ ಅಣ್ಣಾ ಹೋರಾಟಕ್ಕೆ ಪರಿಹಾರ ಕಂಡುಹಿಡಿಯಲು ಹೊರಟಿದ್ದು ವೈಫಲ್ಯಕ್ಕೆ ಕಾರಣ ಎಂದು ಅರೋನ್ ದೂರಿದ್ದಾರೆ.

ಅಣ್ಣ ಹಜಾರೆ ಅವರ ಹೋರಾಟವನ್ನು ನಿರ್ವಹಿಸಿದ ರೀತಿಯ ಬಗ್ಗೆ ಪಕ್ಷದಲ್ಲಿ ಆತ್ಮಾವಲೋಕನದ ಅಗತ್ಯವಿದೆ. ವೈಫಲ್ಯ ಕುರಿತಂತೆ ಪಕ್ಷ ಹಾಗೂ ಸಂಬಂಧಿಸದ ಸಚಿವರ ಸಮಗ್ರ ತನಿಖೆಯ ಅವಶ್ಯಕತೆ ಸಹ ಇದೆ ಎಂದಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಾಹುಲ್, ಪ್ರಧಾನಿ, ಸಂಚು, ಪ್ರವೀಣ್ ಸಿಂಗ್ ಅರೋನ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ