ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫೆಮಾ ಉಲ್ಲಂಘನೆ: ಬಾಬಾ ರಾಮದೇವ್ ವಿರುದ್ಧ ಪ್ರಕರಣ ದಾಖಲು (Yoga Guru Baba Ramdev | Foreign exchange violation case | Enforcement Directorate | India News | Latest India News)
ಫೆಮಾ ಉಲ್ಲಂಘನೆ: ಬಾಬಾ ರಾಮದೇವ್ ವಿರುದ್ಧ ಪ್ರಕರಣ ದಾಖಲು
ನವದೆಹಲಿ, ಗುರುವಾರ, 1 ಸೆಪ್ಟೆಂಬರ್ 2011( 13:44 IST )
PTI
ವಿದೇಶಿ ವಿನಿಮಯ ಉಲ್ಲಂಘಸಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮದೇವ್ ಹಾಗೂ ಅವರ ಟ್ರಸ್ಟ್ ವಿರುದ್ಧ ಜಾರಿ ನಿರ್ದೇಶನಾಲಯ ಮೂಕದ್ದಮೆ ದಾಖಲಿಸಿದೆ.
ವಿದೇಶಿ ತನಿಖಾ ಸಂಸ್ಥೆಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್, ಬಾಬಾ ರಾಮದೇವ್ ಅವರ ಟ್ರಸ್ಟ್‌ನಿಂದ ಶಂಕಿತ ಹಣ ವರ್ಗಾವಣೆ ಕಂಡುಬಂದಿದೆ ಎಂದು ವರದಿ ನೀಡಿದ ಆಧಾರದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಬಾ ರಾಮದೇವ್ ವಿದೇಶಗಳಿಂದ ಟ್ರಸ್ಟ್‌ಗಾಗಿ ಅನಧಿಕೃತವಾಗಿ ಹಣವನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ವಿದೇಶಿ ವಿನಿಮಯ ವ್ಯವಸ್ಥಾಪನಾ ಕಾಯ್ದೆ (ಫೆಮಾ) ಉಲ್ಲಂಘನೆಯಿಂದಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಕಾಟ್‌ಲೆಂಡ್‌ನಲ್ಲಿರುವ ಭಕ್ತರು ದ್ವೀಪವನ್ನು ಬಾಬಾ ರಾಮದೇವ್ ಅವರಿಗೆ ಕೊಡುಗೆಯಾಗಿ ನೀಡಿರುವ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಬ್ರಿಟನ್ ದೇಶದ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ರಾಮದೇವ ಸಂಚಾಲಕತ್ವದಲ್ಲಿ ನಡೆಯುತ್ತಿರುವ ಪತಾಂಜಲಿ ಯೋಗಪೀಠ ಟ್ರಸ್ಟ್, ದಿವ್ಯ ಯೋಗ ಮಂದಿರ ಟ್ರಸ್ಟ್ ಮತ್ತು ಭಾರತ್ ಸ್ವಾಭಿಮಾನ ಟ್ರಸ್ಟ್‌ಗಳಿಗೆ ಹಣದ ಹರಿವಿನ ಮೂಲಗಳು ಬಗ್ಗೆ ತನಿಖೆ ನಡೆಸುವುದು ಜಾರಿ ನಿರ್ದೇಶನಾಲಯದ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಬಾ ರಾಮದೇವ ಸಹಚರ ವೇದ್ ಪ್ರತಾಪ್ ವೈದಿಕ್, ಯೋಗ ಗುರು ಬಾಬಾ ರಾಮದೇವ್ ಟ್ರಸ್ಟ್‌ನಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎನ್ನುವ ಮಾಹಿತಿ ಇದ್ದಲ್ಲಿ ಇಲ್ಲಿಯವರೆಗೆ ಸರಕಾರ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಸರಕಾರ ಬಾಬಾ ರಾಮದೇವ್ ಅವರ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಕಿಡಿಕಾರಿದ್ದಾರೆ.