ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳ ಮಂದಿರ: ರಾಜಮನೆತನದ ಧಾರ್ಮಿಕತೆಯನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್ (Sree Padmanabhaswamy Temple | Thiruvananthapuram | Supreme Court | Travancore royal family | Latest India News | India News)
ಕೇರಳ ಮಂದಿರ: ರಾಜಮನೆತನದ ಧಾರ್ಮಿಕತೆಯನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್
ನವದೆಹಲಿ, ಶುಕ್ರವಾರ, 2 ಸೆಪ್ಟೆಂಬರ್ 2011( 15:22 IST )
PTI
ತಿರುವನಂತಪುರಂ ಶ್ರೀಪದ್ಮನಾಭ ಸ್ವಾಮಿ ಮಂದಿರದ 'ಬಿ' ದ್ವಾರವನ್ನು ತೆರೆಯುವ ಬಗ್ಗೆ ಸುಪ್ರೀಂಕೋರ್ಟ್ ನೇಮಿಸಿದ ತಜ್ಞರು ತೆಗೆದುಕೊಳ್ಳಬೇಕೆ ಹೊರತು ಮಂದಿರದ ಮುಖ್ಯಅರ್ಚಕರಲ್ಲ. ಮಂದಿರದ ಮುಖ್ಯಅರ್ಚಕರು ತೆಗೆದುಕೊಂಡ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.
ಟ್ರಾವನ್‌ಕೋರ್ ರಾಯಲ್ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, 'ಅಷ್ಠಮಂಗಳ ಪ್ರಶ್ನೆ' ಪ್ರಕಾರ ದೇವಸ್ಥಾನದಲ್ಲಿ ದೊರೆತ ಚಿನ್ನಾಭರಣಗಳ ಚಿತ್ರಿಕರಣವಾಗಲಿ ಅಥವಾ ವಿಡಿಯೋಗ್ರಾಫಿ ಮಾಡದಿರಲು ಹಾಗೂ ಮಂದಿರಕ್ಕೆ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗಲಿರುವ ಹಿನ್ನೆಲೆಯಲ್ಲಿ ಮಂದಿರದ 'ಬಿ' ದ್ವಾರವನ್ನು ತೆರೆಯದಂತೆ ಆದೇಶ ನೀಡಬೇಕು ಎಂದು ಕೋರಿತ್ತು.
ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 6 ಕ್ಕೆ ಮುಂದೂಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಇದಕ್ಕಿಂತ ಮೊದಲು ಕೇರಳದ ಜ್ಯೋತೀಷ್ಯರು, ದೇವಾಲಯದಲ್ಲಿ ಪತ್ತೆಯಾದ ಖಜಾನೆಯನ್ನು ದೇವಸ್ಥಾನದಿಂದ ಹೊರಗಡೆ ತೆಗೆದುಕೊಂಡು ಹೋಗುವುದಕ್ಕೆ ದೇವರು ಅನುಮತಿ ನೀಡುವುದಿಲ್ಲ. ದೇವಾಲಯದಲ್ಲಿ ದೊರೆತ ಚಿನ್ನಾಭರಣಗಳನ್ನು ಸ್ಥಳದಿಂದ ಕದಲಿಸಬಾರದು. ಹಾಗೂ ದೇವರ ಕೋಪಕ್ಕೆ ಬಲಿಯಾಗಬಾರದು ಎಂದು 'ಅಷ್ಠಮಂಗಳ ಪ್ರಶ್ನೆ' ಯಲ್ಲಿ ಕಂಡುಬಂದಿದೆ ಎಂದು ಹೇಳಿಕೆ ನೀಡಿದ್ದರು.