ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿದಂಬರಂ ಜೈಲು ಶಿಕ್ಷೆ ಅನುಭವಿಸಲು ಸಿದ್ಧರಾಗಿ: ಸ್ವಾಮಿ (Subramanian Swamy | P Chidambaram | Manmohan Singh | Digvijay Singh | 2G scam)
ಚಿದಂಬರಂ ಜೈಲು ಶಿಕ್ಷೆ ಅನುಭವಿಸಲು ಸಿದ್ಧರಾಗಿ: ಸ್ವಾಮಿ
ಅಲಹಾಬಾದ್, ಸೋಮವಾರ, 5 ಸೆಪ್ಟೆಂಬರ್ 2011( 16:02 IST )
PTI
2ಜಿ ತರಂಗ ಗುಚ್ಚ ಹಗರಣದಲ್ಲಿ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಜೈಲಿಗೆ ಹೋಗಲು ಸಿದ್ಧರಾಗಬೇಕು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
ದೇಶದಲ್ಲಿನ ಭ್ರಷ್ಟಾಚಾರ ತಡೆಯಬೇಕು ಎಂದು ಜನತೆ ಬಯಸಿದಲ್ಲಿ ,ದುರ್ಬಲ ಪ್ರಧಾನಿ ನೇತೃತ್ವದ ಯುಪಿಎ ಸರಕಾರವನ್ನು ದೂರವಿಡುವುದು ಅನಿವಾರ್ಯವಾಗಿದೆ ಎಂದು ಕರಪ್ಶನ್ ಡೇಂಜರ್ ಟು ಡೆಮಾಕ್ರೆಸಿ ಕುರಿತು ಸೆಮಿನಾರ್ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
2008ರಲ್ಲಿ ನೀಡಲಾದ ತರಂಗ ಗುಚ್ಚ ಪರವಾನಿಗಿ ದರವನ್ನು 2001ರಲ್ಲಿಯೇ ನಿಗದಿಪಡಿಸಿರುವುದೇ ಹಗರಣಕ್ಕೆ ಪ್ರಮುಖ ಕಾರಣವಾಗಿದೆ. 2008ರಲ್ಲಿ 2ಜಿ ಲೈಸೆನ್ಸ್ ಪಡೆದ ಕಂಪೆನಿಗಳು, ಎಂಟು ಪಟ್ಟು ಹೆಚ್ಚಿನ ದರದಲ್ಲಿ ಲೈಸೆನ್ಸ್‌ಗಳನ್ನು ಇತರ ಕಂಪೆನಿಗಳಿಗೆ ಮಾರಾಟ ಮಾಡಿವೆ ಎಂದು ಸ್ವಾಮಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಸ್ವಾಮಿ, ಸಿಂಗ್ ಭ್ರಷ್ಟಾಚಾರವನ್ನು ತುಂಬಾ ಹತ್ತಿರದಿಂದ ನೋಡಿರಬಹುದು. ಆದ್ದರಿಂದಲೇ, ಬಾಬಾ ರಾಮದೇವ್ ಅವರಿಗೆ ದೇಣಿಗೆಯನ್ನು ನಗದು ರೂಪದಲ್ಲಿ ಪಡೆಯದಂತೆ ಸಲಹೆ ನೀಡಿದ್ದರು ಎಂದು ವ್ಯಂಗ್ಯವಾಡಿದ್ದಾರೆ.