ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಸ್ಫೋಟ: ಎಲ್ಲೆಡೆ ರಕ್ತ-ಮಾಂಸದ ಚೂರು, ಗಾಯಾಳುಗಳ ಆಕ್ರಂದನ (Delhi Blast | Bloodshed | News in Kannada | Kannada Website)
ದೆಹಲಿ ಹೈಕೋರ್ಟಿಗೆ ನ್ಯಾಯ ಕೇಳಲು ಬಂದವರಿಗೆ ಬಾಂಬ್ ಸ್ಫೋಟದ ರುಚಿ, ಸ್ಫೋಟದ ತೀವ್ರತೆಗೆ ಒಂದು ಕಾಲು ಜರ್ಝರಿತವಾಗಿ, ಇರುವ ಒಂದು ಕಾಲಲ್ಲೇ ಆ ಸ್ಥಳದಲ್ಲಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದ ಒಬ್ಬ ವ್ಯಕ್ತಿ, ಎಲ್ಲೆಡೆ ಹರಡಿಬಿದ್ದಿದ್ದ ರಕ್ತ, ಮಾಂಸದ ಚೂರುಗಳು, ವಕೀಲರು ಮತ್ತು ಕಕ್ಷಿದಾರರು ಹಾಕಿಕೊಂಡ ಬಟ್ಟೆಗಳಲ್ಲೆಲ್ಲಾ ರಕ್ತದ ಕಲೆಗಳು, ಮುಗಿಲು ಮುಟ್ಟಿದ ಆಕ್ರಂದನ - ಇದು ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟದ ಸ್ಥಳದಲ್ಲಿನ ಚಿತ್ರಣ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Delhi Blast
PR


ತನ್ನ ಸಂಬಂಧಿಕರೊಬ್ಬರಿಗೆ ಜಾಮೀನು ದೊರಕಿಸಲೆಂದು ಹೈಕೋರ್ಟಿಗೆ ಬಂದಿದ್ದ ಮಧ್ಯವಯಸ್ಕ ಮಹಿಳೆಯೊಬ್ಬಳು ಸ್ಫೋಟದಿಂದ ಆಘಾತಗೊಂಡು ಕುಳಿತಿದ್ದರೆ, 10 ಮೀಟರ್ ದೂರದಲ್ಲಿ ಕಕ್ಷಿದಾರ ರಾಹುಲ್ ಗುಪ್ತಾ ಎಂಬವರ ಶ್ರವಣ ಶಕ್ತಿಯೇ ಇಲ್ಲವಾಗಿತ್ತು. ಈ ಸ್ಫೋಟ ನಡೆದ ಬಳಿಕ ಕಿವಿ ಕೇಳಿಸುತ್ತಲೇ ಇಲ್ಲ ಎಂದಿದ್ದಾರೆ ಸ್ಫೋಟ ಸಂಭವಿಸಿದಾಗ ಹೈಕೋರ್ಟ್ ಗೇಟಿನ ರಿಸೆಪ್ಶನ್ ಕೌಂಟರ್‌ನಲ್ಲಿದ್ದ ಗುಪ್ತಾ.

ದೊಡ್ಡದೊಂದು ಸದ್ದು ಕೇಳಿಸಿತು. ತಕ್ಷಣವೇ ಜನರು ಕೂಗಾಡುತ್ತಿರುವ ಸದ್ದು ಕೂಡ ಕೇಳಿಸಿತು ಎಂದು ಸಮೀಪದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಗಾರ್ಡ್ ನರೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ದೆಹಲಿ ಹೈಕೋರ್ಟಿನ 5ನೇ ಸಂಖ್ಯೆಯ ಗೇಟ್ ಬಳಿ, ಸ್ಫೋಟ ನಡೆದಾಗ 100ರಿಂದ 200ರಷ್ಟು ಮಂದಿ ಇದ್ದರು. ಅವರೆಲ್ಲರೂ ಕೋರ್ಟ್‌ಗೆ ಹೋಗಲೆಂದು ಎಂಟ್ರಿ ಪಾಸ್‌ಗಳನ್ನು ಪಡೆಯಲು ಸರದಿಯಲ್ಲಿ ನಿಂತಿದ್ದರು. ಹಲವು ವಕೀಲರು ಕೂಡ ಸ್ಥಳದಲ್ಲಿದ್ದರು.

ದೊಡ್ಡ ಸದ್ದು ಕೇಳಿಸಿತ್ತು. ನಾನು ಆ ಸ್ಥಳಕ್ಕೆ ಹೋಗುವುದರೊಳಗೆ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದರು. ಹಲವಾರು ಜನರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ನಾನು ಕಾರು ನಿಲ್ಲಿಸಿ, ಗೇಟಿನತ್ತ ಬಂದೆ. ಅಲ್ಲಿನ ದೃಶ್ಯಾವಳಿ ನೋಡಿ ಬೆಚ್ಚಿ ಬಿದ್ದೆ ಎಂದು ಮಹಿಳಾ ವಕೀಲರೊಬ್ಬರು ತಿಳಿಸಿದ್ದಾರೆ.

ಸ್ಫೋಟ ನಡೆದ ಸ್ಥಳವು ಅತ್ಯಂತ ಹೆಚ್ಚು ಜನರಿರುವ ಗೇಟ್ ಆಗಿದೆ. ಮಾತ್ರವಲ್ಲದೆ ಅದು ಜನರು ಒಳಪ್ರವೇಶಿಸುವ ಸಮಯವೂ ಆಗಿದ್ದರಿಂದ ಜನರ ಸಂಖ್ಯೆ ಹೆಚ್ಚಿತ್ತು ಎಂದು ಮತ್ತೊಬ್ಬ ವಕೀಲರು ಹೇಳಿದ್ದಾರೆ.

ಇನ್ನೊಬ್ಬ ವಕೀಲ, ಆರ್.ಪಿ.ಲೂತ್ರಾ ಅವರು ಪೊಲೀಸರಿಗೆ ಗಾಯಾಳುಗಳನ್ನು ಸಾಗಿಸಲು ನೆರವು ಮಾಡಿದ್ದರು. ಅವರು ಹೇಳುವಂತೆ, "ಸ್ಫೋಟದ ಸದ್ದು ಕೇಳಿದಾಗ ನಾನು ನನ್ನ ಕಕ್ಷಿದಾರರಿಗೆ ಕೋರ್ಟಿನೊಳಗೆ ಹೋಗಲು ಪಾಸ್ ವಿತರಿಸುತ್ತಿದ್ದೆ".

ಸ್ಫೋಟ ನಡೆದಾಗ ಹಲವಾರು ವೃದ್ಧರು ಕೂಡ ಇದ್ದುದರಿಂದಾಗಿ, ಅಲ್ಲೆಲ್ಲಾ ಕನ್ನಡಕಗಳ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪಾಸ್ ಕೌಂಟರ್ ಕೂಡ ಸ್ಫೋಟದ ತೀವ್ರತೆಯಿಂದ ಹಾನಿಗೀಡಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಹುಜಿ, ಹರ್ಕತ್ ಉಲ್ ಜಿಹಾದ್, ಅಫ್ಜಲ್ ಗುರು, ದೆಹಲಿ ಸ್ಫೋಟ, ಹೈಕೋರ್ಟ್ ಸ್ಫೋಟ, ದೆಹಲಿ ಪೊಲೀಸ್, ದೆಹಲಿ ಹೈಕೋರ್ಟ್, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್