ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಸ್ಫೋಟ: ನಡೆಸಿದ್ದು ನಾವೆಂದ ಇಂಡಿಯನ್ ಮುಜಾಹಿದೀನ್! (Delhi Blast | Indian Mujahideen | Latest News in Kannada)
PTI
12 ಜನರನ್ನು ಬಲಿತೆಗೆದುಕೊಂಡು, 60ಕ್ಕೂ ಹೆಚ್ಚು ಮಂದಿ ಗಾಯಗೊಳ್ಳಲು ಕಾರಣವಾದ ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿದಂತೆ ಎಚ್ಚರಿಕೆ ನೀಡಲು ನಾವೇ ಇದನ್ನು ಮಾಡಿದ್ದೇವೆ ಎಂದು ಪಾಕಿಸ್ತಾನ ಮೂಲಕ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ ಸಂಘಟನೆ (ಹುಜಿ) ಹೊಣೆ ಹೊತ್ತು ಕೊಂಡ ಮರುದಿನ, ಇದನ್ನು ನಾವೇ ಮಾಡಿದ್ದು ಎಂದು ಹೇಳಿಕೊಂಡಿದೆ ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆ.

ಮರಣದಂಡನೆಗೆ ಗುರಿಯಾಗಿ ಈಗ ಜೈಲಿನಲ್ಲಿರುವ ಸಂಸತ್ ದಾಳಿ ಆರೋಪಿ, ಜೈಶ್ ಎ ಮಹಮದ್ ಉಗ್ರಗಾಮಿ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡದಿದ್ದರೆ ಇಂತಹಾ ದಾಳಿಗಳು ಇನ್ನಷ್ಟು ಮುಂದುವರಿಯಲಿವೆ. ಪ್ರಮುಖ ಹೈಕೋರ್ಟುಗಳು ಹಾಗೂ ದೇಶದ ಸುಪ್ರೀಂ ಕೋರ್ಟಿನ ಮೇಲೂ ದಾಳಿ ನಡೆಸುತ್ತೇವೆ ಎಂಬ ಒಕ್ಕಣೆಯುಳ್ಳ ಇ-ಮೇಲ್ ಅನ್ನು ರವಾನಿಸಿದ್ದು ತಾನೇ ಎಂದು ಈಗ ಐಎಂ ಹೇಳಿಕೊಂಡಿದೆ. ಭಾರತದ ಮೇಲೆ ದಾಳಿ ನಡೆಸುವುದು ಹೆಮ್ಮೆ ಎಂದುಕೊಂಡಿರುವ ಈ ಉಗ್ರಗಾಮಿ ಸಂಘಟನೆಗಳು, ದೇಶದ ರಕ್ಷಣಾ ವ್ಯವಸ್ಥೆಯ ಹುಳುಕುಗಳನ್ನು ಬಯಲಿಗೆಳೆದಿದ್ದು, ಪ್ರತೀ ಬಾರಿಯೂ ಮುಗ್ಧ ಜನರನ್ನೇ ಹತ್ಯೆ ಮಾಡುತ್ತಿರುವುದನ್ನೇ ಪೌರುಷ ಎಂದು ಹೇಳಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ.

ಮೂವರು ವಶಕ್ಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಕಿಶ್ತವರ್ ಎಂಬಲ್ಲಿ ಎನ್ಐಎ ಮೂವರನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಇ-ಮೇಲ್ ರವಾನೆಯಾಗಿದ್ದ ಮೂಲ ಸ್ಥಳವಾದ ಸೈಬರ್ ಕೆಫೆಯೊಂದರ ಮಾಲೀಕ, 28ರ ಹರೆಯದ ಮಹಮೂದ್ ಅಜೀಜ್ ಖ್ವಾಜಾ ಕೂಡ ಬಂಧಿತರಲ್ಲಿ ಸೇರಿದ್ದಾನೆ. ಅವನ ಸಹೋದರ ಖಾಲಿದ್ ಹುಸೇನ್ ಮತ್ತು ಸೈಬರ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ ಕುಮಾರ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಹುಜಿ ಬಾಂಗ್ಲಾ ದೇಶದಲ್ಲಿಯೂ ನೆಲೆಯನ್ನು ಹೊಂದಿದೆ.

ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ
Delhi Blast Suspects
PTI
ದೇಶದಲ್ಲಿನ್ನೂ ಭಯೋತ್ಪಾದನೆ ಪ್ರಕರಣಗಳನ್ನು ತಡೆಯುವಲ್ಲಿ ಸರಕಾರವಾಗಲೀ, ಗುಪ್ತಚರ ಇಲಾಖೆಯಾಗಲೀ ಸಫಲವಾಗಿಲ್ಲ ಎಂಬುದನ್ನು ಎತ್ತಿ ತೋರಿಸಿದ ದೆಹಲಿ ಹೈಕೋರ್ಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಸುಳಿವು ನೀಡಿದ ಯಾರಿಗೇ ಆದರೂ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಮಂಡಳಿ - ಎನ್ಐಎ ಘೋಷಿಸಿದೆ. (ಚಿತ್ರದಲ್ಲಿ ದೆಹಲಿ ಸ್ಫೋಟ ಶಂಕಿತರ ರೇಖಾ ಚಿತ್ರ)

ಆದರೆ, ಈ ಸಂಬಂಧ ಸ್ಯಾಂಟ್ರೋ ಕಾರೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್, ಕಾರಿಗೂ ಈ ಸ್ಫೋಟಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ದೆಹಲಿ ಪೊಲೀಸರ ಮೇಲೆ ವಿಶ್ವಾಸವಿಲ್ಲದೆಯೋ ಎಂಬಂತೆ ತನಿಖೆಯನ್ನು ಕೇಂದ್ರವು ಸ್ಫೋಟ ನಡೆದ ಕೆಲವೇ ಗಂಟೆಗಳಲ್ಲಿ ಎನ್ಐಎಗೆ ಒಪ್ಪಿಸಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಐಎಂ, ಇಂಡಿಯನ್ ಮುಜಾಹಿದೀನ್, ಹುಜಿ, ಹರ್ಕತ್ ಉಲ್ ಜಿಹಾದ್, ಅಫ್ಜಲ್ ಗುರು, ದೆಹಲಿ ಸ್ಫೋಟ, ಹೈಕೋರ್ಟ್ ಸ್ಫೋಟ, ದೆಹಲಿ ಪೊಲೀಸ್, ದೆಹಲಿ ಹೈಕೋರ್ಟ್, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್