ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಸ್ಫೋಟ: 3ನೇ ಇಮೇಲ್, ಮುಂದಿನ ಗುರಿ ಅಹಮದಾಬಾದ್ ಅಂತೆ (Delhi High Court Blast | Third Email | Ahmedabad | News in Kannada)
ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, "ಮುಂದಿನ ಸ್ಫೋಟ ಅಹಮದಾಬಾದ್‌ನಲ್ಲಿ" ಎಂಬ ಸಂದೇಶವಿರುವ ಮೂರನೇ ಇ-ಮೇಲ್ ಒಂದು ರವಾನೆಯಾಗಿ ಬಂದಿದ್ದು, ಅದರ ಮೂಲ ತನಿಖೆ ನಡೆಸಿದಾಗ ರಷ್ಯಾ ರಾಜಧಾನಿ ಮಾಸ್ಕೋ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮಾಸ್ಕೋ ಮೂಲದ ಪ್ರಾಕ್ಸಿ ಸರ್ವರ್ ಮೂಲಕ ಈ ಇಮೇಲ್ ರವಾನೆಯಾಗಿರುವ ಸಾಧ್ಯತೆಗಳೂ ಇವೆ.

13 ಮಂದಿಯನ್ನು ಬಲಿತೆಗೆದುಕೊಂಡ, ದೆಹಲಿ ಹೈಕೋರ್ಟ್‌ನಲ್ಲಿ ಸ್ಫೋಟ ನಡೆದ ದಿನ ಬುಧವಾರ ಹುಜಿ ಉಗ್ರಗಾಮಿ ಸಂಘಟನೆ, ಮರುದಿನ ಇಂಡಿಯನ್ ಮುಜಾಹಿದೀನ್ ಸಂಘಟನೆಯು ಸ್ಫೋಟದ ಹೊಣೆ ಹೊತ್ತುಕೊಂಡು ಇಮೇಲ್ ರವಾನಿಸಿದ್ದವು. ಮೂರನೇ ದಿನ ದೆಹಲಿ ಪೊಲೀಸರಿಗೆ ಬಂದ ಇಮೇಲ್‌ನ ಬೆನ್ನು ಹತ್ತಿದಾಗ, ಅದು ಮಾಸ್ಕೋದಿಂದ ಬಂದದ್ದೆಂಬ ಮಾಹಿತಿ ದೊರಕಿದೆ. ಇದು ಕೂಡ ಇಂಡಿಯನ್ ಮುಜಾಹಿದೀನ್ ಎಂದು ಹೇಳಿಕೊಂಡು ಬಂದಿತ್ತು. kill.india@ಯಾಹೂ ಡಾಟ್ ಕಾಮ್ ಎಂಬ ಐಡಿಯಿಂದ ಬಂದಿರುವ, ಅಲಿ ಸಯೀದ್ ಎಲ್-ಹೂರೀ ಎಂಬಾತ ಕಳುಹಿಸಿದ ಈ ಇಮೇಲ್‌ನಲ್ಲಿ, ಈ ಸ್ಫೋಟ ಮಾಡಿದ್ದು ಇಂಡಿಯನ್ ಮುಜಾಹಿದೀನ್ ಆಗಿದ್ದು, ಮುಂದಿನ ಸ್ಫೋಟವು ಜನರು ಎಂದೆಂದೂ ಮರೆಯಲಾರದಷ್ಟು ಕ್ರೂರವಾಗಿರಲಿದೆ ಎಂದು ತಿಳಿಸಲಾಗಿದೆ.

ಮುಂದಿನ ಸ್ಫೋಟ 1,8,5,13,4,1,2,1,4 ಎಂಬಲ್ಲಿ ನಡೆಯಲಿದೆ ಎಂದು ಕೋಡ್ ವರ್ಡ್ ಮೂಲಕ ತಿಳಿಸಲಾಗಿದ್ದು, ಈ ಕೋಡ್ ವರ್ಡನ್ನು ಬಿಡಿಸಿದಾಗ ಅಹಮದಾಬಾದ್ ಎಂಬುದು ಸ್ಪಷ್ಟವಾಗುತ್ತದೆ ಎಂದು ಮೂಲಗಳು ಹೇಳಿವೆ.

ಇದು ತೀರಾ ಬಾಲಿಶ ಇಮೇಲ್ ಆಗಿದ್ದು, ಕೋಡ್ ಅನ್ನು ಸುಲಭವಾಗಿ ಡೀಕೋಡ್ ಮಾಡಬಹುದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಗೃಹ ಸಚಿವ ಪಿ.ಚಿದಂಬರಂ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ದೆಹಲಿ ಸ್ಫೋಟ, 3ನೇ ಇಮೇಲ್, ಅಹಮದಾಬಾದ್, ಹೈಕೋರ್ಟ್ ಸ್ಫೋಟ, ದೆಹಲಿ ಪೊಲೀಸ್, ದೆಹಲಿ ಹೈಕೋರ್ಟ್, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್