ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ನಿಗ್ರಹ: ಬಿಜೆಪಿ ಕಟು ಟೀಕೆ; ಚಿದಂಬರಂ ಪ್ರತ್ಯುತ್ತರ (Delhi Blast Probe | Chidambaram | Arun Jaitley | News in Kannada)
2011ರ ಸೆಪ್ಟೆಂಬರ್ 7ರಂದು ರಾಜಧಾನಿ ಹೃದಯಭಾಗವನ್ನೇ ನಡುಗಿಸಿದ ಭಯೋತ್ಪಾದನಾ ದಾಳಿಯು ಜನ ಸಾಮಾನ್ಯರನ್ನು 'ಈ ದೇಶದಲ್ಲಿ ನಾವೆಷ್ಟು ಸುರಕ್ಷಿತರು' ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡಿಕೊಂಡಿದ್ದರೆ, ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ವಾಗ್ಯುದ್ಧ ನಡೆಯುತ್ತಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದೇಶದಲ್ಲಿ ಯಾವುದೇ ಭಯೋತ್ಪಾದನಾ ದಾಳಿಯನ್ನು ತಡೆಯಲು ವಿಫಲವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನೇತಾರ ಅರುಣ್ ಜೇಟ್ಲಿ ಆರೋಪಿಸಿದರು. "ಈ ಹಿಂದೆ ನಡೆದ ಇಂತಹಾ ಯಾವುದೇ ಪ್ರಕರಣಗಳಲ್ಲಿಯೂ ಯಾವುದೇ ಸುಳಿವು ದೊರೆಯದೇ ಇದ್ದ ಘಟನೆ ಎಂದಿಗೂ ನಡೆದಿರಲಿಲ್ಲ. ಭಯೋತ್ಪಾದಕ ಸಂಘಟನೆಗಳ ಕಾರ್ಯವೈಖರಿಯನ್ನು ಪತ್ತೆ ಹಚ್ಚಲು ನಮ್ಮ ಗುಪ್ತಚರ ಇಲಾಖೆಗಳು ವಿಫಲವಾಗಿವೆ ಎಂಬುದರ ಸೂಚನೆಯಿದು" ಎಂದು ಜೇಟ್ಲಿ ಹೇಳಿದರು.

ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಬಂದಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸುತ್ತಾ ಅವರು, ಜನರು ಎಷ್ಟು ಕೋಪೋದ್ರಿಕ್ತರಾಗಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಈ ಘಟನೆಯಾದರೂ ಅವರ ಕಣ್ಣು ತೆರೆಸಬೇಕು. ಸರಕಾರದ ಬದ್ಧತೆಯನ್ನೇ ಇದು ಪ್ರಶ್ನಿಸಿದಂತಾಗಿದೆ ಎಂದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಪಿ.ಚಿದಂಬರಂ, ನಮ್ಮ ಸರಕಾರ ಏನೂ ಮಾಡುತ್ತಿಲ್ಲ ಎಂದು ಯಾರೂ ಟೀಕಿಸಬೇಕಾಗಿಲ್ಲ. ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿಯೇ ಎಷ್ಟು ಪ್ರಕರಣಗಳನ್ನು ಇದುವರೆಗೆ ಭೇದಿಸಲಾಗಿದೆ ಎಂದು ತಿರುಗಿ ಪ್ರಶ್ನಿಸಿದ್ದಾರೆ.

ನಾವು ದೇಶದ ಎಲ್ಲೆಡೆ ಎದುರಾಗಿರುವ ಬೆದರಿಕೆಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ಜನರು ಸಂಕಷ್ಟದಲ್ಲಿರುವಾಗ, ಕುಟುಂಬಗಳು ರೋದಿಸುತ್ತಿರುವಾಗ ಪ್ರತಿಪಕ್ಷಗಳು ಏನೇನೋ ಹೇಳುತ್ತಿರುವುದು ತೀರಾ ದುರದೃಷ್ಟಕರ. ಭಾರತ ಮತ್ತು ನೆರೆಯ ರಾಷ್ಟ್ರಗಳು ಭಯೋತ್ಪಾದನೆಯ ಭೀಕರ ಸವಾಲನ್ನು ಎದುರಿಸುತ್ತಿರುವಾಗ ಬಿಜೆಪಿ ಪಕ್ಷಭೇದವಿಲ್ಲದೆ, ಮುತ್ಸದ್ಧಿತನ ಪ್ರದರ್ಶಿಸಬೇಕಿತ್ತು. ಈ ಗುಣಗಳು ಅದರ ಡಿಎನ್ಎಯಲ್ಲೇ ಇಲ್ಲ ಎಂದು ಚಿದಂಬರಂ ಟೀಕಿಸಿದರು.

ಆರು ಕೇಸುಗಳು ಇನ್ನೂ ಬಗೆಹರಿದಿಲ್ಲ ಎಂಬ ಜೇಟ್ಲಿ ಆರೋಪಕ್ಕೆ ತಿರುಗೇಟು ನೀಡಿದ ದೇಶದ ಗೃಹ ಸಚಿವರು, ಇವುಗಳಲ್ಲಿ ಹಲವು ಕೇಸುಗಳನ್ನು ರಾಜ್ಯ ಸರಕಾರಗಳೇ ತನಿಖೆ ನಡೆಸುತ್ತಿವೆ ಎಂಬುದನ್ನು ಜೇಟ್ಲಿ ಮರೆತಂತಿದೆ. ಬಹುಶಃ ಅಧಿಕಾರದಿಂದ ದೂರವಿರುವುದರಿಂದ ಈ ರೀತಿ ಆಗಿದ್ದಿರಬಹುದು ಎಂದು ಟೀಕಿಸಿದರು.

ನಾನು ಅಧಿಕಾರಕ್ಕೆ ಬಂದ ಬಳಿಕ ಮೂರು ಭಯೋತ್ಪಾದನಾ ದಾಳಿಗಳ ತನಿಖೆಯಲ್ಲಿ ಯಾವುದೇ ಯಶಸ್ಸು ಸಿಕ್ಕಿಲ್ಲ ಎಂದೂ ಚಿದಂಬರಂ ಇದೇ ವೇಳೆ ಒಪ್ಪಿಕೊಂಡರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಚಿದಂಬರಂ ಹೇಳಿದ ಪ್ರಮುಖ ಅಂಶಗಳು:
* ಜನರ ವರ್ತನೆಯೂ ಬದಲಾಗಬೇಕು, ಹೆಚ್ಚು ಶಿಸ್ತು ಇರಬೇಕಾಗುತ್ತದೆ. (ರಾಹುಲ್ ಗಾಂಧಿಗೆ ಜನರು ಧಿಕ್ಕಾರ ಕೂಗಿದ ಕುರಿತು)
* ನಮ್ಮ ವ್ಯವಸ್ಥೆ ಯಾವ ರೀತಿ ಇದೆ ಎಂದರೆ, ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲೂ ಹೆದರುವ ಪರಿಸ್ಥಿತಿ ಇದೆ. ಯಾಕೆಂದರೆ ಯಾರಾದರೂ ಏನಾದರೂ ಟೀಕೆ ಮಾಡುತ್ತಾರೆ.
* ಇಂತಹಾ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ನಾಯಕರು ಪಕ್ಷಭೇದ ರಹಿತವಾಗಿ, ಪ್ರಬುದ್ಧತೆಯನ್ನು, ಮುತ್ಸದ್ಧಿತನವನ್ನು ತೋರ್ಪಡಿಸಬೇಕು.
* ಇಡೀ ಭದ್ರತಾ ವ್ಯವಸ್ಥೆಯನ್ನು ಒಂದೇ ಏಜೆನ್ಸಿ ನಿರ್ವಹಿಸುವುದು ಸಾಧ್ಯವಿಲ್ಲ. ಎಲ್ಲ ಸಂಸ್ಥೆಗಳನ್ನು ಒಗ್ಗಟ್ಟಾಗಿ ಮುನ್ನಡೆಸುವುದು ನಾಯಕತ್ವದ ಕಲೆ.
* ಗತಿಸಿದ ಜೀವಗಳನ್ನು ಹಣದಲ್ಲಿ ಅಳೆಯುವುದು ಸಾಧ್ಯವಿಲ್ಲ. ಆದರೆ, ಈ ಕುಟುಂಬದವರಿಗೆ ಉದ್ಯೋಗ ನೀಡುತ್ತೇವೆ.
* ದೆಹಲಿ ಹೈಕೋರ್ಟ್ ಸ್ಫೋಟ ಪ್ರಕರಣದಲ್ಲಿ "ಭರವಸೆಯ ಸುಳಿವುಗಳು" ಸಿಕ್ಕಿವೆ, ಆದರೆ ಇವು "ಅಂತಿಮ ಮತ್ತು ಖಚಿತ ಸುಳಿವು" ಅಲ್ಲ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಚಿದಂಬರಂ, ದೆಹಲಿ ಸ್ಫೋಟ ತನಿಖೆ, ಅರುಣ್ ಜೇಟ್ಲಿ, ಹೈಕೋರ್ಟ್ ಸ್ಫೋಟ, ದೆಹಲಿ ಪೊಲೀಸ್, ದೆಹಲಿ ಹೈಕೋರ್ಟ್, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್