ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್ ಕರಿಟೋಪಿ ಬದಲಿಸಿದ ಹಜಾರೆಗೆ ದಿಗ್ವಿಜಯ್ ಶ್ಲಾಘನೆ! (Digvijay Singh | Anna Hazare | RSS | Amar Singh | Kannada News)
PTI
ಓಟಿಗಾಗಿ ನೋಟು ಪ್ರಕರಣದಲ್ಲಿ ಯುಪಿಎ ಸರಕಾರವನ್ನು ಅವಿಶ್ವಾಸ ಗೊತ್ತುವಳಿಯಿಂದ ಬಚಾವ್ ಮಾಡಲು ಹೋಗಿ ಈಗ ಜೈಲು ಪಾಲಾಗಿರುವ ಅಮರ್ ಸಿಂಗ್‌ಗೆ ಆಪತ್ಕಾಲದಲ್ಲೊಬ್ಬ ಗೆಳೆಯ ಸಿಕ್ಕಿದ್ದಾರೆ. ಅವರೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್. ಅಮರ್ ಸಿಂಗ್ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಅವರು, ಸಮಾಜವಾದಿ ಪಕ್ಷದ ಮಾಜಿ ನಾಯಕ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ವಿಶ್ವಾಸ ಪ್ರಕಟಿಸಿದ್ದಾರೆ. ಇದೇ ವೇಳೆ, ಆರೆಸ್ಸೆಸ್ ಮಂದಿ ಕರಿ ಟೋಪಿಯ ಬದಲು ಬಿಳಿ (ಗಾಂಧಿ) ಟೋಪಿ ಧರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ಅಣ್ಣಾ ಹಜಾರೆಯನ್ನು ಅಭಿನಂದಿಸುವುದಾಗಿಯೂ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಅಮರ್ ಬಗ್ಗೆ ನನಗೆ ಸಂಪೂರ್ಣ ಅನುಕಂಪವಿದೆ ಮತ್ತು ಅವರು ನಿರ್ದೋಷಿಯೆಂದು ಸಾಬೀತುಪಡಿಸಿಕೊಳ್ಳಲಿದ್ದಾರೆ" ಎಂದು ನುಡಿದರು.

ಇದೇವೇಳೆ, ದೆಹಲಿ ಹೈಕೋರ್ಟ್ ಹೊರಗೆ ನಡೆದ ಬಾಂಬ್ ಸ್ಫೋಟವನ್ನು ಬಲವಾಗಿ ಖಂಡಿಸಿದ ಅವರು, ಭಯೋತ್ಪಾದನೆ ಚಟುವಟಿಕೆಗಳಲ್ಲು ಉಕ್ಕಿನ ಹಸ್ತದಿಂದ ಹತ್ತಿಕ್ಕಬೇಕಾಗಿದೆ ಎಂದು ಹೇಳಿದರಲ್ಲದೆ, 'ಯಾವುದೇ ಸಮುದಾಯದ' ಮೂಲಭೂತವಾದಿಗಳನ್ನು ಬಿಡಬಾರದು ಎಂದು ಅಭಿಪ್ರಾಯಪಟ್ಟರು.

ಅಣ್ಣಾ ಹಜಾರೆ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ದಿಗ್ವಿಜಯ್, ತಾವು ಎರಡು ಕಾರಣಗಳಿಗಾಗಿ ಗಾಂಧಿವಾದಿಯನ್ನು ಗೌರವಿಸುವುದಾಗಿ ಹೇಳಿದರು. ಅವೆಂದರೆ, ಇದುವರೆಗೆ ಕರಿ ಟೋಪಿ ಧರಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮಂದಿಯನ್ನು ಬಿಳಿ ಟೋಪಿ ಧರಿಸುವಂತೆ ಹಾಗೂ ಎರಡನೆಯದಾಗಿ ಆರೆಸ್ಸೆಸ್‌ನ ಕೇಸರಿ ಧ್ವಜದ ಬದಲಾಗಿ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿಯುವಂತೆ ಮಾಡಿದ್ದಾರೆ ಎಂದು ಎಂದಿನಂತೆ ಆರೆಸ್ಸೆಸ್ ವಿರುದ್ಧ ವ್ಯಂಗ್ಯವಾಡಿದರು.

ಅಲ್ಲದೆ, ತಾನೆಂದಿಗೂ ಅಣ್ಣಾ ಹಜಾರೆಯವರನ್ನು ಆರೆಸ್ಸೆಸ್ ಮುಖವಾಡ ಎಂದು ಕರೆದೇ ಇಲ್ಲ ಎಂದೂ ಹೇಳಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ದಿಗ್ವಿಜಯ್ ಸಿಂಗ್, ಆರೆಸ್ಸೆಸ್, ಅಣ್ಣಾ ಹಜಾರೆ, ಅಮರ್ ಸಿಂಗ್, ಓಟಿಗಾಗಿ ನೋಟು, ಕನ್ನಡ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಭಾರತೀಯ ಸುದ್ದಿ, ರಾಜಕೀಯ ಸುದ್ದಿ