ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿಯ 42 ಕೋಟಿ 'ಕಿರೀಟ' ಹಿಂತಿರುಗಿಸಲಾಗದು: ತಿರುಪತಿ (Tirupathi | Janardhan Reddy | Gold Crown | Kannada Website)
ತಿರುಮಲ ಬೆಟ್ಟದೊಡೆಯ ಶ್ರೀ ವೆಂಕಟೇಶ್ವರನಿಗೆ ಕರ್ನಾಟಕದ ಮಾಜಿ ಪ್ರವಾಸೋದ್ಯಮ ಸಚಿವ, ಗಣಿ ಧಣಿ, ಈಗ ಜೈಲು ಪಾಲಾಗಿರುವ ಗಾಲಿ ಜನಾರ್ದನ ರೆಡ್ಡಿ ಕೊಟ್ಟಿರುವ 45 ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ಅವರಿಗೆ ಮರಳಿಸುವಂತಿಲ್ಲ ಎಂದು ದೇವಸ್ಥಾನದ ಟ್ರಸ್ಟ್ ಸ್ಪಷ್ಟಪಡಿಸಿದೆ.

ಎರಡು ವರ್ಷಗಳ ಹಿಂದೆ ರೆಡ್ಡಿ ಈ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿದ್ದರು. ಅವರು ಭ್ರಷ್ಟಾಚಾರದಲ್ಲಿ ತೊಡಗಿ ಈಗ ಜೈಲುಪಾಲಾಗಿದ್ದು, ಇದನ್ನು ವಾಪಸ್ ಅವರಿಗೇ ಮರಳಿಸಬೇಕು ಎಂದು ಕೆಲವು ಭಕ್ತಾದಿಗಳು ಇತ್ತೀಚೆಗೆ ತಿರುಪತಿಯಲ್ಲಿ ಗದ್ದಲ ಎಬ್ಬಿಸಿದ್ದರು.

ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಕಾರ್ಯನಿರ್ವಹಣಾಧಿಕಾರಿ ಎಲ್.ವಿ.ಸುಬ್ರಹ್ಮಣ್ಯಂ ಈ ಬಗ್ಗೆ ಈ ಸ್ಪಷ್ಟನೆ ನೀಡಿದ್ದಾರೆ. 2009ರ ಜೂನ್ 11ರಂದು 2.5 ಅಡಿ ಎತ್ತರದ, 30 ಕಿಲೋ ತೂಗುವ ಕಿರೀಟವನ್ನು ರೆಡ್ಡಿ ಒಪ್ಪಿಸಿದ್ದರು. "ಕಳಂಕಿತ"ರ ಕೈಯಿಂದ ಬಂದ ಕಾಣಿಕೆಯನ್ನು ಸ್ವೀಕರಿಸಬಾರದು ಎಂಬುದು ಈ ಪ್ರತಿಭಟನಾ ನಿರತ ಭಕ್ತರ ಆಗ್ರಹವಾಗಿತ್ತು. ಭಕ್ತರು ನೀಡಿದ ಕಾಣಿಕೆಯನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಹಿಂತಿರುಗಿಸುವಂತಿಲ್ಲ ಎಂದು ಸುಬ್ರಹ್ಮಣ್ಯಂ ಸ್ಪಷ್ಟಪಡಿಸಿದ್ದಾರೆ.

ಆದರೆ, ಯಾವುದೇ ಕಾಣಿಕೆಗಳ ಕುರಿತು ವಿವರ ನೀಡಲು ನಮಗೇನೂ ಹಿಂಜರಿಕೆಯಿಲ್ಲ. ಆದಾಯ ತೆರಿಗೆ ಅಥವಾ ಇನ್ಯಾವುದೇ ಸರಕಾರಿ ಇಲಾಖೆಗಳು ವಿವರಣೆ ಬಯಸಿದರೆ ನೀಡುವುದಾಗಿ ತಿಳಿಸಿದರು.

ಅಕ್ರಮ ಗಣಿಗಾರಿಕೆಯಲ್ಲಿ ಭಾರೀ ಹೆಸರು ಕೇಳಿ ಬರುತ್ತಿದ್ದ ಜನಾರ್ದನ ರೆಡ್ಡಿಯನ್ನು ಸೆಪ್ಟೆಂಬರ್ 5ರಂದು ಬಂಧಿಸಲಾಗಿತ್ತು.ಅವರೀಗ ಹೈದರಾಬಾದಿನ ರಾಂಪಲ್ಲಿ ಜೈಲಿನಲ್ಲಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ತಿರುಮಲ, ತಿರುಪತಿ, ಜನಾರ್ದನ ರೆಡ್ಡಿ, ಕಿರೀಟ, ಅಕ್ರಮ ಗಣಿಗಾರಿಕೆ, ಕರ್ನಾಟಕ ವಾರ್ತೆ, ಕನ್ನಡ ಸುದ್ದಿ, ಕನ್ನಡ ವೆಬ್ ಸೈಟ್