ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಚಿದಂಬರಂ ವಿರುದ್ಧ ತನಿಖೆ ಬೇಡವೆಂದ ಸಿಬಿಐ (CBI | Central Government | P Chidambaram | 2G scam case | Supreme Court | A Raja| Subramanian Swamy)
PTI
2ಜಿ ತರಂಗ ಗುಚ್ಚ ಹಗರಣದಲ್ಲಿ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಪಾತ್ರದ ಯಾವುದೇ ತನಿಖೆಯನ್ನು ಕೇಂದ್ರ ಸರಕಾರ ಮತ್ತು ಕೇಂದ್ರೀಯ ತನಿಖಾ ದಳ ವಿರೋಧಿಸುವುದಾಗಿ ಹೇಳಿಕೆ ನೀಡಿವೆ.

2ಜಿ ಹಗರಣದಲ್ಲಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸುವಂತಿಲ್ಲ ಅಥವಾ ಇದೇ ರೀತಿಯಲ್ಲಿ ತನಿಖೆಯನ್ನು ನಡೆಸಿ ಎಂದು ಹೇಳುವ ಅದಿಕಾರವಿಲ್ಲ ಎಂದು ಕೇಂದ್ರೀಯ ತನಿಖಾ ದಳ(ಸಿಬಿಐ) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

2ಜಿ ಹಗರಣದ ಮತ್ತಷ್ಟು ತನಿಖೆ ಅಥವಾ ಪ್ರಕರಣಕ್ಕೆ ಹೆಚ್ಚುವರಿ ಆರೋಪಿಗಳ ಸೇರ್ಪಡೆಯನ್ನು ವಿಚಾರಣಾ ನ್ಯಾಯಾಲಯ ಮಾತ್ರ ಆದೇಶ ನೀಡಬಹುದಾಗಿದೆಯೇ ಹೊರತು ಸುಪ್ರೀಂಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ಸಿಬಿಐ ತಿಳಿಸಿದೆ.

2ಜಿ ತರಂಗಾಂತರ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮಾಡಿರುವ ಹಗರಣದ ಬಗ್ಗೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಈಗಾಗಲೇ ಸಲ್ಲಿಸಿದ್ದರಿಂದ ಪ್ರಕರಣದ ತನಿಖೆ ಮುಕ್ತಾಯಗೊಂಡಂತಾಗಿದೆ ಎಂದು ಸಿಬಿಐ ಹೇಳಿಕೆ ನೀಡಿದೆ.

ಕಳೆದ 2008ರ ಜನೆವರಿಯಿಂದ ಜುಲೈವರೆಗೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ಅಂದಿನ ವಿತ್ತಸಚಿವ ಪಿ.ಚಿದಂಬರಂ ನಾಲ್ಕು ಬಾರಿ ಸಭೆ ಸೇರಿದ್ದಾರೆ. 2ಜಿ ತರಂಗಾಂತರ ದರವನ್ನು ಚಿದಂಬರಂ ಮತ್ತು ರಾಜಾ ಜೊತೆಯಾಗಿಯೇ ನಿರ್ಧರಿಸಿದ್ದಾರೆ. ಆದ್ದರಿಂದ, ರಾಜಾ ಜೊತೆಯಲ್ಲಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರನ್ನು ಕೂಡಾ 2ಜಿ ಹಗರಣದಲ್ಲಿ ಆರೋಪಿಯಾಗಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: 2ಜಿ ಹಗರಣ ಪಿಚಿದಂಬರಂ, ಸಿಬಿಐ, ಎರಾಜಾ, ಸುಪ್ರೀಂಕೋರ್ಟ್, ಸುಬ್ರಹ್ಮಣ್ಯಂ ಸ್ವಾಮಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಭಾರತೀಯ ಸುದ್ದಿ