ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ: ದಯಾನಿಧಿ ಮಾರನ್ ವಿರುದ್ಧ ಕೇಸ್ ದಾಖಲಿಸಲು ಸಿಬಿಐ ಸಿದ್ಧತೆ (Maxis Group | Dayanidhi Maran | CBI | Aircel | A Raja | 2G Spectrum scam)
2ಜಿ: ದಯಾನಿಧಿ ಮಾರನ್ ವಿರುದ್ಧ ಕೇಸ್ ದಾಖಲಿಸಲು ಸಿಬಿಐ ಸಿದ್ಧತೆ
ನವದೆಹಲಿ, ಬುಧವಾರ, 21 ಸೆಪ್ಟೆಂಬರ್ 2011( 11:49 IST )
PTI
2ಜಿ ತರಂಗಗುಚ್ಚ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ವಿರುದ್ಧ ಆರೋಪಪಟ್ಟಿ ದಾಖಲಿಸಿದ ಸಿಬಿಐ, ಇದೀಗ ಮಲೇಷಿಯಾ ಮೂಲದ ಮ್ಯಾಕ್ಸಿಸ್ ಗ್ರೂಪ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅದಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್ ವಿರುದ್ಧ ಪ್ರಕರಣ ದಾಖಲಿಸಿಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯಿಂದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಆದ್ದರಿಂದ, ಸೆಪ್ಟೆಂಬರ್ ಮಾಸಾಂತ್ಯಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಅರುಣ್ ಶೌರಿ, ಪ್ರಮೋದ್ ಮಹಾಜನ್ ಮತ್ತು ದಯಾನಿಧಿ ಮಾರನ್ ಟೆಲಿಕಾಂ ಸಚಿವರಾಗಿದ್ದ ಅವಧಿಯಲ್ಲಿ ನಡೆದ 2ಜಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಇದೀಗ, ದಯಾನಿಧಿ ಮಾರನ್ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಜಿ.ಎಸ್.ಸಿಂಘಾವಿ ಮತ್ತು ಎ.ಕೆ.ಗಂಗೂಲಿ ನ್ಯಾಯಮೂರ್ತಿಗಳ ನೇತೃತ್ವದ ಪೀಠಕ್ಕೆ ಸಿಬಿಐ ಮಾಹಿತಿ ನೀಡಿದೆ.
ಒಂದು ವೇಳೆ ದಯಾನಿಧಿ ಮಾರನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದಲ್ಲಿ ಡಿಎಂಕೆ ಪಕ್ಷದ ಮೂವರು ಸಂಸದರು ನ್ಯಾಯಾಂಗದ ಬಲೆಗೆ ಸಿಲುಕಿದಂತಾಗುತ್ತದೆ. ಕನಿಮೋಳಿ ಜಾಮೀನು ಅರ್ಜಿಗೆ ಕೆಲ ರಾಜಕೀಯ ಕಾರಣಗಳು ಅಡ್ಡಿಯಾಗುತ್ತಿವೆ ಎಂದು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಈಗಾಗಲೇ ಆರೋಪಿಸಿದ್ದಾರೆ.