ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ: ಅಣ್ಣಾ ಹಜಾರೆ ಸಲಹೆ ಪಡೆಯಲಿರುವ ಪಾಕ್ ನಿಯೋಗ (Anna Hazare | Anti-graft crusade | Pakistani delegation | Ralegan Siddhi | Corruption | NGO Sarhad)
ಭ್ರಷ್ಟಾಚಾರ: ಅಣ್ಣಾ ಹಜಾರೆ ಸಲಹೆ ಪಡೆಯಲಿರುವ ಪಾಕ್ ನಿಯೋಗ
ನವದೆಹಲಿ, ಬುಧವಾರ, 21 ಸೆಪ್ಟೆಂಬರ್ 2011( 15:44 IST )
PTI
ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ರಣಕಹಳೆ ಮೊಳಗಿಸಿದ್ದ ಹಿರಿಯ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಖ್ಯಾತ ವಿದೇಶಗಳಲ್ಲೂ ವ್ಯಾಪಿಸಿದೆ. ಇದೀಗ, ಪಾಕಿಸ್ತಾನದ ನಿಯೋಗವೊಂದು ಹಜಾರೆ ತವರೂರಾದ ಮಹಾರಾಷ್ಟ್ರದ ರಾಲೆಗಣ್ ಸಿದ್ಧಿಯಲ್ಲಿ ಭೇಟಿ ಮಾಡಲಿದ್ದು, ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಕೆಲ ಸಲಹೆಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ನಿಯೋಗದಲ್ಲಿ ಮಾಜಿ ಕಾನೂನು ಸಚಿವ ಇಕ್ಬಾಲ್ ಹೈದರ್ ಸೇರಿದಂತೆ ಮೂವರು ಕಾನೂನು ತಜ್ಞರಿದ್ದಾರೆ. ಎನ್‌ಜಿಒ ಸರಹದ್ ಸಂಸ್ಥೆ ಭೇಟಿಯನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ರಾಷ್ಟ್ರಗಳಉ ಒಂದೇ ರೀತಿಯ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಪಾಕ್ ನಿಯೋಗ ಇಂದು ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿ, ಭಾರತದಲ್ಲಿ ನಡೆಸಲಾದ ಭ್ರಷ್ಟಾಚಾರದ ವಿರುದ್ಧಧ ಚಳುವಳಿಯನ್ನು ಪಾಕಿಸ್ತಾನದಲ್ಲಿ ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ಎನ್‌ಜಿಒ ಸರಹದ್ ಸಂಸ್ಥೆಯ ಮುಖ್ಯಸ್ಥ ಸಂಜಯ್ ನಹಾರ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಹೇಗೆ ಆರಂಭಿಸಬೇಕು ಎನ್ನುವ ಬಗ್ಗೆ ಅಣ್ಣಾ ಹಜಾರೆಯವರ ಸಲಹೆಗಳನ್ನು ಪಡೆಯಲಾಗುವುದು ಎಂದು ನಿಯೋಗದ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಸಶಕ್ತ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, 12 ದಿನಗಳ ಕಾಲ ನಿರಶನ ಕೈಗೊಂಡಾಗ, ದೇಶಾದ್ಯಂತ ಜನತೆಯಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು.