ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಡುಗಿಯರನ್ನು ಕೆಣಕಬೇಡಿ 'ಶೂ' ಒರೆಸಬೇಕಾದಿತು ಎಚ್ಚರ..! (Orissa High Court | Suman Patra | Assaulting | Chandi Mandir)
ಹುಡುಗಿಯರನ್ನು ಕೆಣಕಬೇಡಿ 'ಶೂ' ಒರೆಸಬೇಕಾದಿತು ಎಚ್ಚರ..!
ಕಟಕ್, ಗುರುವಾರ, 22 ಸೆಪ್ಟೆಂಬರ್ 2011( 12:28 IST )
PTI
ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಆರೋಪಿಗೆ, ಸ್ಥಳೀಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರ 'ಶೂ' ಗಳನ್ನು ಸ್ವಚ್ಚಗೊಳಿಸುವ ಷರತ್ತಿನ ಮೇಲೆ ಓರಿಸ್ಸಾ ಹೈಕೋರ್ಟ್ ಜಾಮೀನು ನೀಡಿದೆ.
ಕಳೆದ ಜುಲೈ ತಿಂಗಳಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪಿ ಸುಮನ್ ಪಾತ್ರಾ (19) ಅವರಿಗೆ ನ್ಯಾಯಮೂರ್ತಿ ಸಿ.ಆರ್. ದಾಶ್ ಜಾಮೀನು ನೀಡಿದ್ದಾರೆ.
ಪ್ರತಿ ರವಿವಾರದಂದು 12 ವಾರಗಳವರೆಗೆ 2 ಗಂಟೆಗಳ ಕಾಲ ನಗರದಲ್ಲಿರುವ ಚಾಂಡಿ ಮಂದಿರಕ್ಕೆ ಆಗಮಿಸುವ ಭಕ್ತರ 'ಶೂ'ಗಳನ್ನು ಸ್ವಚ್ಚಗೊಳಿಸುವಂತೆ ಹೈಕೋರ್ಟ್ ಆರೋಪಿ ಸುಮನ್‌ಗೆ ನಿರ್ದೇಶನ ನೀಡಿದೆ.
ತನಿಖಾಧಿಕಾರಿಯ ನೆರವಿನೊಂದಿಗೆ ಮಂದಿರದ ಅಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಆರೋಪಿ ಸುಮನ್‌ಗೆ 'ಶೂ' ಸ್ವಚ್ಚಗೊಳಿಸುವ ಕಾರ್ಯಕ್ಕೆ ಸ್ಥಳಾವಕಾಶ ಒದಗಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.