ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ: ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಅಣ್ಣಾ ಹಜಾರೆಗೆ ಅಹ್ವಾನ (Karamat ali | Justice Nasir Aslam Jahid | Anna Hazare | Corruption | Anti-corruption movement | Pakistan)
PTI
ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿದ ಪಾಕಿಸ್ತಾನದ ಇಬ್ಬರು ಸದಸ್ಯರ ನಿಯೋಗ, ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಅಹ್ವಾನ ನೀಡಿದೆ.

ಪಾಕಿಸ್ತಾನದ ನಿಯೋಗದ ಸದಸ್ಯರಾದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಾಸೀರ್ ಅಸ್ಲಾಮ್ ಜಾಹಿದ್ ಮತ್ತು ಮಾಜಿ ನ್ಯಾಯಮೂರ್ತಿ ಕರಾಮತ್ ಅಲಿ, ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿ ಭ್ರಷ್ಟಾಚಾರ ವಿರೋಧಿ ಚಳುವಳಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರು ನಡೆಸಿದ ಯಶಸ್ವಿ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದಾಗಿ,ಪಾಕಿಸ್ತಾನದಲ್ಲಿರುವ ಸಮಾಜ ಸುಧಾರಕ ಹೋರಾಟಗಾರರ ನೈತಿಕ ಬಲವನ್ನು ಹೆಚ್ಚಿಸಿದೆ. ಅಣ್ಣಾ ಹಜಾರೆಯವರು ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಜನತೆ ಬಯಸಿದ್ದಾರೆ ಎಂದು ಅಲಿ ತಿಳಿಸಿದ್ದಾರೆ.

ಭಾರತದಂತೆ ಪಾಕಿಸ್ತಾನವೂ ಕೂಡಾ ಭ್ರಷ್ಟಾಚಾರ ಸಮಸ್ಯೆಯಿಂದ ಬಳಲುತ್ತಿದೆ. ಒಂದು ವೇಳೆ ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ಚಳುವಳಿಗೆ ನನ್ನಿಂದ ಸಹಾಯವಾಗುತ್ತಿದ್ದಲ್ಲಿ ಪಾಕಿಸ್ತಾನಕ್ಕೆ ಖಂಡಿತವಾಗಯೂ ತೆರಳುವುದಾಗಿ ಅಣ್ಣಾ ಹಜಾರೆ ಹೇಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಕರಾಮತ್ ಅಲಿ, ನ್ಯಾಯಮೂರ್ತಿ ನಾಸೀರ್ ಅಸ್ಲಾಮ್ ಜಾಹಿದ್, ಅಣ್ಣಾ ಹಜಾರೆ, ಭ್ರಷ್ಟಾಚಾರ, ಭ್ರಷ್ಟಾಚಾರ ವಿರೋಧಿ ಚಳುವಳಿ