ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ: ಪ್ರಣಬ್ ಪತ್ರದಿಂದ ಚಿದಂಬರಂ ಪಾತ್ರ ಸ್ಪಷ್ಟ: ಡಿಎಂಕೆ (2G spectrum | Pricing | DMK | A Raja | Prime Minister | P Chidambaram | Supreme Court)
PTI
2ಜಿ ತರಂಗ ಗುಚ್ಚ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮಾತ್ರ ಭಾಗಿಯಾಗಿಲ್ಲ. ಅಂದಿನ ವಿತ್ತ ಸಚಿವ ಪಿ.ಚಿದಬಂರಂ ಕೂಡಾ ಹೊಣೆಗಾರರು ಎಂದು ಸಚಿವ ಪ್ರಣಬ್ ಮುಖರ್ಜಿ ಬರೆದ ಪತ್ರ ಸಾಕ್ಷಿಯಾಗಿದೆ ಎಂದು ಡಿಎಂಕೆ ತಿರುಗೇಟು ನೀಡಿದೆ.

2ಜಿ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಪ್ರದಾನಮಂತ್ರಿ ಮತ್ತು ವಿತ್ತಸಚಿವರ ಸಲಹೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಂದಿನ ವಿತ್ತಸಚಿವ ಚಿದಂಬರಂ 2ಜಿ ತರಂಗ ಗುಚ್ಚ ದರ ನಿಗದಿಯಲ್ಲಿ ಪ್ರಮುಖ ಪಾತ್ರವಹಿಸಿ, ಲೈಸೆನ್ಸ್ ಹರಾಜು ಮಾಡದಿರಲು ನಿರ್ಧರಿಸಿದ್ದರು ಎನ್ನುವುದು ಪ್ರಣಬ್ ಮುಖರ್ಜಿ ಪತ್ರದಿಂದಾಗಿ ಸ್ಪಷ್ಟವಾಗಿದೆ ಎಂದು ಡಿಎಂಕೆ ವಕ್ತಾರರು ತಿಳಿಸಿದ್ದಾರೆ.

ಒಂದು ವೇಳೆ, ಅಂದಿನ ವಿತ್ತಸಚಿವ ಚಿದಂಬರಂ 2ಜಿ ಲೈಸೆನ್ಸ್‌ಗಳನ್ನು ಹರಾಜು ಮಾಡಲು ನಿರ್ಧರಿಸಿದ್ದಲ್ಲಿ, ಇಂತಹ ವಿವಾದ ಸೃಷ್ಟಿಯಾಗುತ್ತಿರಲಿಲ್ಲ ಎಂದು ವಿತ್ತಸಚಿವಾಲಯ ಸುಪ್ರೀಂಕೋರ್ಟ್‌ ಸಲ್ಲಿಸಿದ ದಾಖಲೆಯಲ್ಲಿ ಬಹಿರಂಗಪಡಿಸಿದೆ.

2ಜಿ ತರಂಗ ಗುಚ್ಚ ಹಗರಣದಲ್ಲಿ ಪ್ರಮುಖ ಆರೋಪಿಯೆಂದು ಪರಿಗಣಿಸಲಾದ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಚಿದಂಬರಂ ಕೂಡಾ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪ್ರತಿಯೊಂದು ನಿರ್ಧಾರಗಳನ್ನು ಜಂಟಿಯಾಗಿ ತೆಗೆದುಕೊಳ್ಳಲಾಗುತ್ತಿತ್ತು ಎಂದು ನ್ಯಾಯಾಲಯದಲ್ಲಿ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: 2ಜಿ ತರಂಗ ಗುಚ್ಚ ಹಗರಣ, ಡಿಎಂಕೆ, ಪ್ರಧಾನಮಂತ್ರಿ, ಪಿಚಿದಂಬರಂ, ಸುಪ್ರೀಂಕೋರ್ಟ್