ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿದು ರಾಜೀನಾಮೆ ನೀಡಲಿ, ಇಲ್ಲವೇ ವಜಾಗೊಳಿಸಿ: ಯಶವಂತ್ ಸಿನ್ಹಾ (Supreme Court | Subramanian Swamy | P Chidambaram | BJP | 2G scam)
ಪ್ರಣಬ್ ಮುಖರ್ಜಿ ಪತ್ರದಿಂದ 2ಜಿ ಹಗರಣದಲ್ಲಿ ಚಿದಂಬರಂ ಪಾತ್ರವಿದೆ ಎನ್ನುವುದು ಸ್ಪಷ್ಟವಾಗಿದೆ. ಚಿದಂಬರಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಥವಾ ಪ್ರಧಾನಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ವಜಾಗೊಳಿಸಿದ ನಂತರ, ಅವರ ವಿರುದ್ಧ ಸಿಬಿಐ ತನಿಖೆ ಕೂಡಾ ನಡೆಯಬೇಕು ಎಂದು ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ, ಸರಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2ಜಿ ತರಂಗ ಗುಚ್ಚ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ರಾಜೀನಾಮೆ ನೀಡಬೇಕು. 2ಜಿ ಹಗರಣದಲ್ಲಿ ಚಿದು ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

2ಜಿ ತರಂಗ ಗುಚ್ಚ ದರ ನಿಗದಿಯಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರೊಂದಿಗೆ ಅಂದಿನ ವಿತ್ತಸಚಿವ ಪಿ.ಚಿದಂಬರಂ ಜಂಟಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ವಿತ್ತಸಚಿವ ಪ್ರಣಬ್ ಮುಖರ್ಜಿ ಬರೆದ ಪತ್ರವನ್ನು ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ, ಸುಪ್ರೀಂಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿದ ನಂತರ ವಿಪಕ್ಷಗಳು ಚಿದಂಬರಂ ರಾಜೀನಾಮೆಗೆ ಒತ್ತಾಯಿಸಿವೆ.

2ಜಿ ಹಗರಣದಲ್ಲಿ ಚಿದಂಬರಂ ಪಾತ್ರವಿದೆ ಎಂದು ಬಿಜೆಪಿ ಪಕ್ಷ ಹಲವು ಬಾರಿ ಪ್ರಸ್ತಾಪಿಸಿದೆ. ಆದರೆ, ಇದೀಗ, 2ಜಿ ಹಗರಣದಲ್ಲಿ ಚಿದಂಬರಂ ಪಾತ್ರವಿರುವುದು ಅವರ ಪಕ್ಷದ ಸಚಿವರಿಂದಲೇ ಬಹಿರಂಗವಾಗಿದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ವ್ಯಂಗ್ಯವಾಡಿದ್ದಾರೆ.

ಅಂದಿನ ವಿತ್ತಸಚಿವ ಪಿ.ಚಿದಂಬರಂ ಒಂದು ವೇಳೆ ತಮ್ಮ ನಿಲುವಿಗೆ ಬದ್ಧರಾಗಿ 2ಜಿ ತರಂಗ ಗುಚ್ಚ ಲೈಸೆನ್ಸ್‌ಗಳನ್ನು ಹರಾಜುಗೊಳಿಸಿದ್ದಲ್ಲಿ, ಇಂತಹ ಹಗರಣ ಹೊರಬರುತ್ತಿರಲಿಲ್ಲ ಎಂದು ವಿತ್ತಸಚಿವಾಲಯ ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿದ ವರದಿ, 2ಜಿ ಹಗರಣಕ್ಕೆ ಹೊಸ ತಿರುವು ನೀಡಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸುಪ್ರೀಂಕೋರ್ಟ್, ಸುಬ್ರಹ್ಮಣ್ಯಂ ಸ್ವಾಮಿ, ಪಿಚಿದಂಬರಂ, ಬಿಜೆಪಿ, 2ಜಿ ಹಗರಣ, ಬಿಜೆಪಿ, ಕಾಂಗ್ರೆಸ್, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ