ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿಯವರೇ ಇನ್ನೂ ಚಿದಂಬರಂ ರಕ್ಷಿಸುತ್ತಿರಲ್ಲ ಯಾಕೆ?: ಬಿಜೆಪಿ (2G spectrtum scam | P Chidambaram | Manmohan Singh | CBI | BJP | Pranab Mukherjee)
PTI
2ಜಿ ತರಂಗ ಗುಚ್ಚ ಹಗರಣದಲ್ಲಿ ಪಿ.ಚಿದಂಬರಂ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಕರ್ತವ್ಯಚ್ಯುತಿ ಎಸಗಿರುವ ಚಿದಂಬರಂ ಅವರಿಗೆ ನಿಮ್ಮ ಸಮರ್ಥನೆ ಯಾಕೆ? ಎಂದು ಪ್ರಧಾನಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್, ಪಿ.ಚಿದಂಬರಂ ಅವರನ್ನು ಸಮರ್ಥಿಸಿಕೊಳ್ಳುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಿರ್ಧಾರ ಪ್ರಶ್ನಾರ್ಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2ಜಿ ಹಗರಣದ ತನಿಖೆ ಪ್ರಧಾನಮಂತ್ರಿ ಕಾರ್ಯಾಲಯದ ಕದ ತಟ್ಟಬಾರದು ಎನ್ನುವ ಉದ್ದೇಶದಿಂದ ಪಿ,ಚಿದಂಬರಂ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಯೇ ಎನ್ನುವ ಸಂಶಯಗಳು ಕಂಡುಬರುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಣಬ್ ಮುಖರ್ಜಿ ನೇತೃತ್ವದ ವಿತ್ತಸಚಿವಾಲಯ ಪ್ರಧಾನಿ ಕಾರ್ಯಾಲಯಕ್ಕೆ ವಿವರಣೆ ನೀಡಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಪ್ರಧಾನಿಯವರು ಬಹಿರಂಗ ಹೇಳಿಕೆ ನೀಡಬೇಕು ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ.

2008ರಲ್ಲಿ ಅಂದಿನ ವಿತ್ತಸಚಿವ ಪಿ.ಚಿದಂಬರಂ ಬಯಸಿದ್ದಲ್ಲಿ 2ಜಿ ತರಂಗ ಗುಚ್ಚ ಲೈಸೆನ್ಸ್‌ಗಳನ್ನು ಹರಾಜು ಮಾಡಬಹುದಿತ್ತು ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ, ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಿರುವುದು ಇದೀಗ ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: 2ಜಿ ಹಗರಣ, ಪಿ, ಚಿದಂಬರಂ, ಮನಮೋಹನ್ ಸಿಂಗ್, ಸಿಬಿಐ, ಬಿಜೆಪಿ, ಪ್ರಣಬ್ ಮುಖರ್ಜಿ