ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಕ್ಷ್ಮಣ ರೇಖೆಯನ್ನು ದಾಟಬೇಡಿ: ಸುಪ್ರೀಂಕೋರ್ಟ್‌ಗೆ ಸರಕಾರ ಪಾಠ (2G spectrum case | spectrum allocation | Latest India News | Politics)
PTI
2ಜಿ ಹಗರಣದ ತನಿಖೆಯ ಮೇಲ್ವಿಚಾರಣೆಯನ್ನು ವಿರೋಧಿಸಿದ ಕೇಂದ್ರ ಸರಕಾರದ ಪರ ಹಿರಿಯ ವಕೀಲ ಪಿ.ಪಿ.ರಾವ್, ಸುಪ್ರೀಂಕೋರ್ಟ್ ಲಕ್ಷ್ಮಣರೇಖೆಯನ್ನು ದಾಟಬಾರದು. ಕಾನೂನಿನಂತೆ ವರ್ತಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಪಾಠ ಹೇಳಿದ್ದಾರೆ.

ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ರಾವ್, ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯ ಝಾಕಿಯಾ ಜಪ್ರಿ ಪ್ರಕರಣ ಸೇರಿದಂತೆ ಯಾವುದೇ ಪ್ರಕರಣದಲ್ಲಿ, ಒಂದು ಬಾರಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದಲ್ಲಿ, ಪ್ರಕರಣದ ತನಿಖೆ ಮುಕ್ತಾಯಗೊಂಡ ನಂತರ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ಅಂತ್ಯಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಸಿಬಿಐ ಪರ ವಕೀಲರಾದ ಕೆ.ಕೆ.ವೇಣುಗೋಪಾಲ ಮಧ್ಯಪ್ರವೇಶಿಸಿ ಮಾತನಾಡಿದ ಅವರು, 2ಜಿ ಹಗರಣದಲ್ಲಿ ಅನೇಕ ವ್ಯಕ್ತಿಗಳು ಭಾಗಿಯಾಗಿದ್ದರಿಂದ, ತನಿಖೆಯ ಮೇಲ್ವಿಚಾರಣೆಯನ್ನು ಮುಂದುವರಿಸಬೇಕು. ನ್ಯಾಯಾಲಯ ಬಯಸಿದಲ್ಲಿ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದ್ದಾರೆ.

ಕೇಂದ್ರ ಸರಕಾರದ ಅಂದಿನ ಸಾಲಿಸಿಟರ್ ಜನರಲ್ ಪ್ರಕರಣದ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ನೀಡಿದ ಹೇಳಿಕೆಯನ್ನು ಹಿಂಪಡೆದಿದ್ದಾರೆಯೇ ಎಂದು ನ್ಯಾಯಮೂರ್ತಿ ಸಿಂಘ್ವಿ, ಸರಕಾರ ಪರ ವಕೀಲರಾದ ರಾವ್‌ಗೆ ಪ್ರಶ್ನಿಸಿದರು.

ಸಾಲಿಸಿಟರ್ ಜನರಲ್ ಹೇಳಿಕೆಯನ್ನು ಹಿಂಪಡೆಯುತ್ತಿಲ್ಲ. ಹೇಳಿಕೆಯನ್ನು ಹಿಂಪಡೆಯುವಂತಹ ಹಂತವನ್ನು ದಾಟಿದ್ದೇವೆ. 2ಜಿ ಹಗರಣದ ತನಿಖೆ ಮುಕ್ತಾಯಗೊಂಡಿದ್ದು, ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಕಾನೂನಿನ ಪ್ರಕಾರ ಆರೋಪಪಟ್ಟಿ ಸಲ್ಲಿಸಿದ ನಂತರ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ಅಂತ್ಯವಾಗಬೇಕು ಎಂದು ಪಿ.ಪಿ. ರಾವ್ ವಾದಮಂಡಿಸಿದ್ದಾರೆ.

ನ್ಯಾಯಮೂರ್ತಿ ಸಿಂಘ್ವಿ ರಾವ್ ಹೇಳಿಕೆಗೆ ಉತ್ತರಿಸಿ, ಪ್ರಕರಣದಿಂದ ಪ್ರಕರಣಕ್ಕೆ ಕಾನೂನಿನಲ್ಲಿ ಬದಲಾವಣೆಗಳಾಗುತ್ತಿರುತ್ತವೆ ಎಂದು ತಿರುಗೇಟು ನೀಡಿದರು.

ನ್ಯಾಯಮೂರ್ತಿ ಸಿಂಘ್ವಿ ಹೇಳಿಕೆಯನ್ನು ಬಲವಾಗಿ ಅಲ್ಲಗಳೆದ ಪಿ.ಪಿ.ರಾವ್, ನೀವು(ಕೋರ್ಟ್) ಲಕ್ಷ್ಮಣ ರೇಖೆಯನ್ನು ದಾಟಲು ಸಾಧ್ಯವಿಲ್ಲ. ಒಂದು ವೇಳೆ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂದು ಬಯಸಿದಲ್ಲಿ ವಿಸ್ತೃತ ಫೀಠಕ್ಕೆ ಶಿಫಾರಸು ಮಾಡಿ ಎಂದು ಸವಾಲು ಹಾಕಿದರು.

ನ್ಯಾಯಮೂರ್ತಿ ಗಂಗೂಲಿ ಮಾತನಾಡಿ, ಒಂದು ವೇಳೆ ಸೀತಾ ಲಕ್ಷ್ಮಣರೇಖೆಯನ್ನು ದಾಟದಿದ್ದಲ್ಲಿ ರಾವಣನ ಹತ್ಯೆಯಾಗುತ್ತಿರಲಿಲ್ಲ. ಲಕ್ಷ್ಮಣರೇಖೆ ಮಿತಿಯಲ್ಲಿರುವ ಉದ್ದೇಶಕ್ಕಾಗಿ ಬಳಸಲಾಗುತ್ತದೆಯೇ ಹೊರತು ಪರಮಶ್ರೇಷ್ಠವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: 2ಜಿ ಹಗರಣ, ಸುಪ್ರೀಂಕೋರ್ಟ್, ಸಿಬಿಐ, ಲಕ್ಷ್ಮಣ ರೇಖೆ