ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯ ಬಜೆಟ್ ಮಂಡನೆ - ಕೃಷಿ-ಶಿಕ್ಷಣ-ನೀರಾವರಿಗೆ ಆದ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಬಜೆಟ್ ಮಂಡನೆ - ಕೃಷಿ-ಶಿಕ್ಷಣ-ನೀರಾವರಿಗೆ ಆದ್ಯತೆ
ಬಿಜೆಪಿ ಸರ್ಕಾರದ 2ನೇ ಬಜೆಟ್ ಮಂಡನೆ
NRB
ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸತತ ನಾಲ್ಕನೇ ಬಾರಿ ಮುಂಗಡ ಪತ್ರ ಮಂಡಿಸಲು ಅವಕಾಶ ಮಾಡಿಕೊಟ್ಟ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ವಿಧಾನಮಂಡಲದಲ್ಲಿ 2009-10ರ ಸಾಲಿನ ರಾಜ್ಯ ಬಜೆಟ್ ಅನ್ನು ಶುಕ್ರವಾರ ಮಧ್ನಾಹ್ನ 12.30ಕ್ಕೆ ಮಂಡಿಸುತ್ತಾ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ವಿದ್ಯುತ್ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಸಗೊಬ್ಬರ ಕೊರತೆ ಸರ್ಕಾರಕ್ಕೆ ಎದುರಾದ ಮೊದಲ ಸವಾಲು ಎಂದ ಅವರು ಇವೆಲ್ಲ ಸಮಸ್ಯೆಗಳ ನಡುವೆಯೂ ಸ್ಥಿರತೆ ಮತ್ತು ಅಭಿವೃದ್ದಿಯನ್ನು ಕಾಯ್ದುಕೊಂಡಿದ್ದು, ರೈತರ ಹಿತಕ್ಕೆ ಬದ್ದರಾಗಿರುವುದಾಗಿ ಹೇಳಿದರು.

ಬಜೆಟ್ ಮುಖ್ಯಾಂಶ:

ಜಾಗತಿಕ ಆರ್ಥಿಕ ಕುಸಿತದಿಂದ ರಾಜ್ಯಕ್ಕೂ ಸಂಕಷ್ಟ ಎದುರಾಗಿದೆ.

ಅಭಿವೃದ್ದಿ ಯೋಜನೆಗಳಿಗೆ ಒತ್ತು

ಸೇವಾ ಕ್ಷೇತ್ರದ ಬೆಳವಣಿಗೆ ಶೇ.9.3ಕ್ಕೆ ಇಳಿಕೆ

ಉದ್ಯಮ ವಲಯದ ರಫ್ತು ಉತ್ಪನ್ನಗಳಿಗೆ ಬೇಡಿಕೆ ಕಡಿಮೆ

ಕೃಷಿ ಕ್ಷೇತ್ರದ ಉತ್ಪನ್ನ ಬೆಳವಣಿಗೆ ಶೇ.6ಕ್ಕೆ ಇಳಿಕೆ ಸಾಧ್ಯತೆ

ಮಾಹಿತಿ ತಂತ್ರಜ್ಞಾನ, ಜವಳಿ ಕ್ಷೇತ್ರಗಳಲ್ಲಿ ಬೇಡಿಕೆ ಕುಸಿತ

ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟ ತಲುಪಿಲ್ಲ

ವಿತ್ತೀಯ ಕೊರತೆ ನಿಯಂತ್ರಣ

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಹಿನ್ನೆಡೆ, ತೆರಿಗೆ ಸಂಗ್ರಹ ಕುಸಿತ

ಯೋಜನಾ ವೆಚ್ಚದ ಅನುದಾನ ಹೆಚ್ಚಳಕ್ಕಾಗಿ ಕೇಂದ್ರಕ್ಕೆ ಮನವಿ

29,500ಕೋಟಿ ರೂಪಾಯಿ ಯೋಜನಾ ಗಾತ್ರ

ರೈತರ ವಿದ್ಯುತ್ ಸರಬರಾಜಿಗೆ 2100ಕೋಟಿ

ಪ್ರತಿ ತಾಲೂಕಿನಲ್ಲೂ ಗೋ ಶಾಲೆ ಆರಂಭ

ಪ್ರತಿ ಗೋಶಾಲೆಗೆ 10ಲಕ್ಷ ರೂ.ಅನುದಾನ

ಮೀನುಗಾರರ ಸ್ವಸಹಾಯ ಗುಂಪುಗಳಿಗೆ 10 ಕೋಟಿ ರೂ.

ಶಿಕ್ಷಣ ಕ್ಷೇತ್ರಕ್ಕೆ 8,880 ಕೋಟಿ

ವಿದ್ಯುತ್ ವಲಯದ ಯೋಜನೆಗೆ 6,107 ಕೋಟಿ ರೂ.

ನೀರಾವರಿಗೆ 4,714 ಕೋಟಿ ರೂ.

ಶೇ.3ರ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ವಿಸ್ತರಣೆ

ಬೆಂಗಳೂರು ಸೇರಿ ನಗರಾಭಿವೃದ್ದಿಗೆ 7,376ಕೋಟಿ

ಕೃಷಿ ಅಭಿವೃದ್ದಿಗೆ 2,440 ಕೋಟಿ ರೂ.

ಸಾವಯವ ಕೃಷಿಗೆ 100 ಕೋಟಿ ರೂ. ಅನುದಾ

ಕೋಲಾರಕ್ಕೆ ತೋಟಗಾರಿಕಾ ಕಾಲೇಜು ಮಂಜೂರು

ಬೆಂಬಲ ಬೆಲೆ ಒದಗಿಸಲು 750ಕೋಟಿ ರೂ.ಮೀಸಲು

ಉದ್ಯೋಗ ಮೇಳದಿಂದ 13ಸಾವಿರ ನಿರುದ್ಯೋಗಳಿಗೆ ಪ್ರಯೋಜನ

ಈ ಸಾಲಿನಲ್ಲಿ ಸಾವಿರ ರೈತರಿಗೆ ವಿದೇಶ ಪ್ರವಾಸ

ಗ್ರಾಮೀಣಾಭಿವೃದ್ದಿಗೆ 3063 ಕೋಟಿ ರೂ.

ಮಲೆನಾಡಿನಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ 25ಕೋಟಿ ರೂ.

ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯ

ಚಾಮರಾಜನಗರದಲ್ಲಿ ಶೈತ್ಯಾಗಾರಕ್ಕೆ 10 ಕೋಟಿ ರೂ.

ಗದಗದ ಪಶು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 5ಕೋಟಿ ರೂ.
1 | 2  >>  
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಡು-ಗಂಗಾಜಲ ಯಾಕೆ? ಕುಡಿಯಲು ನೀರು ಕೊಡಿ: ಬೇಗ್
ಚೌಧುರಿ ವಿರುದ್ಧ ಎಫ್‌‌ಐಆರ್ ದಾಖಲಿಸಲು ಮೀನಮೇಷ
ಕಳಪೆ ಔಷಧಿ ಪೂರೈಕೆ ಕಂಪೆನಿಗಳು ಕಪ್ಪುಪಟ್ಟಿಗೆ
ಭಕ್ತರಿಗೆ ಗಂಗಾಜಲ - ಸಿದ್ದರಾಮಯ್ಯ ಆಕ್ರೋಶ
ರಾಧಿಕಾ ಹಣದ ಮೂಲ: ಸಿಬಿಐ ತನಿಖೆಗೆ ಆಗ್ರಹ
ಹೈಕೋರ್ಟ್ ಕಲಾಪಕ್ಕೆ ಸಿಬ್ಬಂದಿ ಬಹಿಷ್ಕಾರ