ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಾನಲ್ಲ, ಭದ್ರತಾ ಸಭೆ ರದ್ದು ಮಾಡಿದ್ದು ಚಿದು: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನಲ್ಲ, ಭದ್ರತಾ ಸಭೆ ರದ್ದು ಮಾಡಿದ್ದು ಚಿದು: ಸಿಎಂ
ರಾಜ್ಯದ ಭದ್ರತಾ ಪರಿಸ್ಥಿತಿ ಕುರಿತು ಚರ್ಚಿಸಲು ನಿಗದಿಯಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಯವರಿಗೆ ಪುರುಸೊತ್ತಿಲ್ಲ ಎಂಬ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರ ಆರೋಪವನ್ನು ಅಲ್ಲಗಳೆದಿರುವ ಬಿ.ಎಸ್. ಯಡಿಯೂರಪ್ಪ, ಸಭೆ ರದ್ದತಿಗೆ ತಾನು ಕಾರಣವಲ್ಲ, ಬದಲಿಗೆ ಸಚಿವರೇ ಉದ್ದೇಶಪೂರ್ವಕವಾಗಿ ಸಭೆಯನ್ನು ಮುಂದೂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರ ಗೃಹಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ರಾಜ್ಯದ ಆಂತರಿಕ ಭದ್ರತೆ, ಕಾನೂನು ಸುವ್ಯಸ್ಥೆ ಮತ್ತು ಚುನಾವಣಾ ತಯಾರಿ ಕುರಿತ ಸಭೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮಾರ್ಚ್ 4, 5 ಮತ್ತು 7ರಂದು ಸಭೆ ನಿಗದಿ ಪಡಿಸಿ ವಿನಾಕಾರಣ ಮುಂದೂಡಿದ್ದು ಕೇಂದ್ರ ಸಚಿವರು. ಇದರಿಂದ ತನಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.

ತಾನು ಇತರ ಪ್ರಮುಖ ಕಾರ್ಯನಿಮಿತ್ತ ಸ್ವಕ್ಷೇತ್ರಕ್ಕೆ ತೆರಳಿದ್ದು, ಚಿದಂಬರಂ ಸಭೆಯಲ್ಲಿ ತಮ್ಮ ಪರವಾಗಿ ಪಾಲ್ಗೊಳ್ಳುವಂತೆ ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಸೂಚಿಸಲಾಗಿತ್ತು. ಆಚಾರ್ಯ ಬೆಂಗಳೂರಿನಲ್ಲೇ ತಂಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಸಭೆ ರದ್ದು ಪಡಿಸಿರುವ ಕೇಂದ್ರ ಸಚಿವರು ಅದನ್ನು ರಾಜಕೀಯವಾಗಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ದೂರಿದ್ದಾರೆ.

ರಾಜ್ಯಕ್ಕೆ ಎನ್ಎಸ್‌ಜಿ, ಐಬಿಪಿಎಫ್ ಪೊಲೀಸ್ ಪಡೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕೇಂದ್ರವು ಹಿಂದೇಟು ಹಾಕುತ್ತಿದ್ದು, ಈ ವಿಚಾರದಲ್ಲಿ ಸಹಕರಿಸುತ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ತನಗೆ ವಹಿಸಲಾಗಿತ್ತು: ಆಚಾರ್ಯ
ಕೇಂದ್ರ ಸಚಿವರ ಸಭೆಯಲ್ಲಿ ಭಾಗವಹಿಸಲು ತನಗೆ ಸೂಚಿಸಲಾಗಿತ್ತು ಎಂಬುದಾಗಿ ರಾಜ್ಯ ಗೃಹಸಚಿವ ವಿ.ಎಸ್. ಆಚಾರ್ಯ ಹೇಳಿದ್ದಾರೆ. ಅಲ್ಲದೆ ಈ ಸಭೆಗೆ ತಾನು ಸಂಪೂರ್ಣ ಸನ್ನದ್ಧವಾಗಿದ್ದೆ ಎಂದೂ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಕೇಂದ್ರ ಸಚಿವರ ಭೇಟಿಗಾಗಿ ಕಾಯುತ್ತಿದ್ದರು. ಕೊನೆ ಕ್ಷಣದಲ್ಲಿ ತಮ್ಮ ಕ್ಷೇತ್ರದಲ್ಲಿ ಅಗತ್ಯ ಕಾರ್ಯವಿದ್ದ ಕಾರಣ ಅವರು ಈ ಕಾರ್ಯವನ್ನು ತನಗೆ ಒಪ್ಪಿಸಿ ತೆರಳಿದ್ದರು ಎಂಬುದಾಗಿ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.

"ತಾನು ತನ್ನ ಕ್ಷೇತ್ರದ ಸಂದರ್ಶನಕ್ಕೆ ತೆರಳುತ್ತಿರುವುದರಿಂದಾಗಿ ಮೂರನೇ ಬಾರಿಗೆ ಮರುನಿಗದಿಯಾಗಿದ್ದ ಈ ಭದ್ರತಾ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದರಿಂದ, ಕೊನೆ ಕ್ಷಣದಲ್ಲಿ ಕರ್ನಾಟಕ ಭೇಟಿ ಕೈಬಿಡಬೇಕಾಯಿತು" ಎಂಬುದಾಗಿ ಶುಕ್ರವಾರ ಕೇಂದ್ರ ಗೃಹ ಸಚಿವಾಲಯ ಹೇಳಿತ್ತು.

ಚಿದಂಬರಂ ಭೇಟಿಗೆ ಮುಖ್ಯಮಂತ್ರಿಗೆ ಪುರುಸೊತ್ತಿಲ್ಲ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬುರ್ಖಾ ವಿರುದ್ಧ ಹೇಳಿಕೆ: ಮುತಾಲಿಕ್ ಕ್ಷಮೆಗೆ ಆಗ್ರಹ
ದೇವೇಗೌಡರಿಗೆ ಬುದ್ದಿ ಇಲ್ಲ: ಜನಾರ್ದನ ರೆಡ್ಡಿ
'ಸರಸ್' ವಿಮಾನ ದುರಂತ-ಮೂವರು ಸಜೀವ ದಹನ
ಕಾಂಗ್ರೆಸ್ ಭಿನ್ನಮತದಿಂದ ಬಿಜೆಪಿ ಅಧಿಕಾರಕ್ಕೆ: ದೇಶಪಾಂಡೆ
ಖುರೇಶಿ ವಜಾಕ್ಕೆ ಬಿಜೆಪಿ ಕಾರ್ಯಕರ್ತರ ಆಗ್ರಹ
ಬಿಜೆಪಿಯೂ ಅಪ್ಪ-ಮಕ್ಕಳ ಪಕ್ಷ: ಕುಮಾರಸ್ವಾಮಿ