ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಎಲ್ಲಿಯೇ ನಡೆಯಲಿ ಅಲ್ಲಿಗೆ 'ತೆನೆ ಹೊತ್ತ' ಮಹಿಳೆ ಹಾಜರ್.ಇದು ಪಕ್ಷದ ಮೇಲಿನ ಅಭಿಮಾನವಂತೆ, ಹಾಗೆ ತೆನೆಹೊತ್ತ ವೇಷದಲ್ಲಿರುವುದು ನಿಜವಾದ ಮಹಿಳೆಯಲ್ಲ ಅದು ಪುರುಷ ವೇಷಧಾರಿ!
ಜೆಡಿಎಸ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರುವುದಾಗಿ ತಿಳಿಸಿರುವ ಶ್ರೀನಿವಾಸ್, ಕಳೆದ 15ವರ್ಷದಿಂದ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ತನ್ನ ಆರ್ಥಿಕ ಸ್ಥಿತಿ ಮಾತ್ರ ತುಂಬಾ ಹದಗೆಟ್ಟಿದೆ ಎಂದು ಟಿವಿ9 ಚಾನೆಲ್ ಜತೆ ಮಾತನಾಡುತ್ತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತನಗೆ ಏನಾದರು ಸಹಾಯ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಈವರೆಗೂ ಏನೂ ಸಹಾಯವಾಗಿಲ್ಲ ಎಂದು ತಿಳಿಸಿದ ಶ್ರೀನಿವಾಸ್, ಕುಮಾರಸ್ವಾಮಿ ಅವರು ತಮ್ಮ ಪಾಲಿಗೆ ಸಾಕ್ಷಾತ್ ಮನೆ ದೇವರು ಎಂದು ಹೊಗಳಿದರು . 'ಮುಂದೆ ಖಂಡಿತವಾಗಿಯೂ ಕುಮಾರಣ್ಣ ಅವರು ತಮಗೆ ನೆರವು ನೀಡುತ್ತಾರೆಂಬ ವಿಶ್ವಾಸವಿದೆ ಎನ್ನುತ್ತಾರೆ' ಶ್ರೀನಿವಾಸ್. ಸದ್ಯದ ತನ್ನ ಸ್ಥಿತಿ ಕಷ್ಟಕರವಾಗಿದೆ ಎಂದರು. ಇದು ಪ್ರತಿ ಚುನಾವಣಾ ಪ್ರಚಾರದಲ್ಲಿ ಎಲ್ಲರ ಗಮನ ಸೆಳೆಯುವ ಹಸಿರು ಸೀರೆ, ಕೆಂಪು ರವಿಕೆ ತೊಟ್ಟು, ತಲೆ ಮೇಲೆ ತೆನೆ ಹೊತ್ತು ಪೋಸು ಕೊಡುವ 'ಶ್ರೀನಿವಾಸ್ ' ಅವರ ಅಳಲು.