ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಭಿಷೇಕ್ ಪ್ರಕರಣ:ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿ ಸೆರೆ (Yeddyurappa | Saloman | R. ashok | lingarajapura | abhishek | BBmp)
ಅಭಿಷೇಕ್ ಪ್ರಕರಣ:ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿ ಸೆರೆ
ಬೆಂಗಳೂರು, ಶನಿವಾರ, 8 ಆಗಸ್ಟ್ 2009( 15:25 IST )
ಬೆಂಗಳೂರು ಲಿಂಗರಾಜಪುರದ ಮೋರಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಅಭಿಷೇಕ್ ಜೀವಂತವಾಗಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿ ಸಾಲೋಮನ್ ಎಂಬಾತನನ್ನು ಶನಿವಾರ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
'ನಾನು ಶುಕ್ರವಾರ ಕಾಚರಕನಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಭಿಷೇಕ್ ಓದುತ್ತಿದ್ದ ಶಾಲೆಯಲ್ಲಿನ ಪರಿಚಿತರೊಬ್ಬರು ಬಂದು, ನಿಮ್ಮ ಮಗ ಬದುಕಿದ್ದಾನೆ. ನಮ್ಮ ಬಳಿ ಇದ್ದಾನೆ. ಅವನನ್ನು ಶನಿವಾರ ನಿಮ್ಮ ಮನೆಗೆ ಕಳುಹಿಸಲಾಗುವುದು' ಎಂದು ಅಭಿಷೇಕ್ ಅವರ ತಾಯಿ ಭಾರತಿ ಅವರಿಗೆ ಸಾಲೋಮನ್ ಹೇಳಿದ್ದ.
ಮೋರಿಯಲ್ಲಿ ಕೊಚ್ಚಿ ಹೋದ ಮಗ ಬದುಕಿದ್ದಾನೆ ಎಂಬ ವಿಷಯ ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಆದರೆ ನೀರಿನಲ್ಲಿ ಕೊಚ್ಚಿಹೋದ ಮಗು ಹೇಗೆ ಬದುಕುಳಿದಿರಬಹುದು ಎಂಬುದು ನನಗೆ ಆಶ್ಚರ್ಯ ತಂದಿದೆ. ಇದನ್ನು ನಂಬಲೂ ಸಾಧ್ಯವಾಗುತ್ತಿಲ್ಲ ಎಂದು ಭಾರತಿ ಅವರು ಪ್ರತಿಕ್ರಿಯಿಸಿದ್ದರು.
ಸುಳ್ಳು ಸುದ್ದಿ ಹಬ್ಬಿಸಿ, ಅಭಿಷೇಕ್ ಪೋಷಕರಲ್ಲಿ ಆಸೆ ಹುಟ್ಟಿಸಿದ್ದ ಕಿಡಿಗೇಡಿ ಸಾಲೋಮನ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.