ಲಂಚ;ಸಂಪಂಗಿ ವಿರುದ್ಧ ಕ್ರಮಕ್ಕೆ ಶೆಟ್ಟರ್ ಐತಿಹಾಸಿಕ ನಿರ್ಧಾರ
ಬೆಂಗಳೂರು, ಶನಿವಾರ, 8 ಆಗಸ್ಟ್ 2009( 19:00 IST )
ಲಂಚ ಹಗರಣದ ಕುಣಿಕೆಗೆ ಸಿಕ್ಕಿರುವ ವೈ.ಸಂಪಂಗಿಯವರನ್ನು ಸರ್ಕಾರ ಹಾಗೂ ಪಕ್ಷ ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ ಎಂದು ರಾಜ್ಯದ ದೆಹಲಿ ಪ್ರತಿನಿಧಿ ಧನಂಜಯ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕಾನೂನು ಪ್ರಕಾರ ವೈ.ಸಂಪಂಗಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದರು. ನಿಯಮದಂತೆ ಶಾಸಕರ ವಿರುದ್ದ ತನಿಖೆಗೆ ಸ್ಪೀಕರ್ ಜಗದೀಶ್ ಶೆಟ್ಟರ್ ಅನುಮತಿ ನೀಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದಾರೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಯಾವುದೇ ಕಾರಣಕ್ಕೂ ಅವರನ್ನು ರಕ್ಷಿಸಲು ಪಕ್ಷ ಹಾಗೂ ನಮ್ಮ ಸರ್ಕಾರ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕ ರೇಣುಕಾರಾಚಾರ್ಯ ಸೇರಿದಂತೆ ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.