ಜ್ಯೋತಿಷ್ಯವು ವಿಜ್ಞಾನವೂ ಅಲ್ಲ, ಜ್ಞಾನದಾಹಿಯೂ ಅಲ್ಲ, ಅದು ಕಂದಾಚಾರದ ಅಂಧಶ್ರದ್ಧೆಯಾಗಿದ್ದು, ಇದನ್ನು ಸರ್ಕಾರ ನಿಷೇಧಿಸಬೇಕೆಂದು ಕರ್ನಾಟಕ ವಿಚಾರವಾದಿಗಳ ಸಂಘದ ಅಧ್ಯಕ್ಷ ಎ.ಎನ್.ನಟರಾಜ್ ಆಗ್ರಹಿಸಿದರು.
ಕನ್ನಡ ಸಂಘರ್ಷ ಸಮಿತಿ ಹೊಂಬೇಗೌಡ ನಗರದಲ್ಲಿ ಹಮ್ಮಿಕೊಂಡಿದ್ದ ಶಾಲಾ-ಕಾಲೇಜುಗಳಲ್ಲಿ ಜ್ಯೋತಿಷ್ಯ ಕಲಿಕೆ ಅನಗತ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸಂವಿಧಾನದ ನಿರ್ದೇಶನ ಸೂತ್ರದಲ್ಲಿ ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ವೈಚಾರಿಕ ವಿಚಾರಧಾರೆಯನ್ನು ಬೆಳೆಸಬೇಕು ಎನ್ನುತ್ತದೆ. ಜ್ಯೋತಿಷ್ಯ ಶಾಸ್ತ್ರ ಇದಕ್ಕೆ ವ್ಯತಿರಿಕ್ತ ಧೋರಣೆಯನ್ನು ಹೊಂದಿದೆ. ಜ್ಯೋತಿಷ್ಯ ಭಾರತೀಯ ಮೂಲದ್ದಲ್ಲ, ಅದು ಈಜಿಪ್ಟ್‌ನಿಂದ ಗ್ರೀಕ್ ಮೂಲಕ ಕ್ರಿ.ಶ.7ನೇ ಶತಮಾನದಲ್ಲಿ ಭಾರತಕ್ಕೆ ರವಾನೆಯಾಯಿತು ಎಂದು ವಿವರಿಸಿದರು.