ಬೆಂಗಳೂರಿನ ಹಲಸೂರಿನಲ್ಲಿ ಕಳೆದ 18 ವರ್ಷಗಳಿಂದ ಮುಸುಕುಧರಿಸಿ ಕುಳಿತಿದ್ದ ತಮಿಳು ದಾರ್ಶನಿಕ, ಕವಿ ತಿರುವಳ್ಳುವರ್ ಅವರ ಪ್ರತಿಮೆಗೆ ಭಾನುವಾರ ಹನ್ನೊಂದೂವರೆ ಗಂಟೆಗೆ ಬಿಡುಗಡೆಯ ಭಾಗ್ಯ ಲಭಿಸಿತು.
ಹಲಸೂರು ಕೆರೆಯ ಬಳಿಯ ನೀಲಕಂಠನ್ ವೃತ್ತದಲ್ಲಿ ಸ್ಥಾಪಿಸಲಾಗಿರುವ ಪ್ರತಿಮೆಯನ್ನು ತಮಿಳ್ನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು, ವೃತ್ತದ ಬಳಿ ಇರುವ ಆರ್‌ಬಿಎನ್ಎಂಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾರಂಭದ ವೇದಿಕೆಯಿಂದ ದೂರಸಂವೇದಿ ಗುಂಡಿ ಒತ್ತುಮ ಮೂಲಕ ಅನಾವರಣಗೊಳಿಸಿದರು.
ಕನ್ನಡ ನಾಡಗೀತೆ ಜೈ ಭಾರತ ಜನನಿಯ ತನುಜಾತೆಯೊಂದಿಗೆ ಸಮಾರಂಭ ಆರಂಭ ಗೊಂಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೈರಾಂ ರಾಜೆ ಅರಸ್ ಸ್ವಾಗತಕೋರಿದರು.
ಪ್ರತಿಮೆ ಅನಾವರಣಗೊಳ್ಳುತ್ತಲೇ ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ಮಂದಿಯ ಹರ್ಷೋದ್ಗಾರ, ಸಂಭ್ರಮ ಮುಗಿಲು ಮುಟ್ಟಿತು.
NRB
ಅದ್ಧೂರಿಯಿಂದ ನಡೆದ ಈ ವಿಜೃಂಭಣೆಯ ಸಮಾರಂಭದ ವೇದಿಕೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ, ತಮಿಳ್ನಾಡಿನ ಮುಖ್ಯಮಂತ್ರಿ ಕರುಣಾನಿಧಿ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ವೆಂಕಯ್ಯ ನಾಯ್ಡು, ಸಂಸದ ಅನಂತ್ ಕುಮಾರ್, ಕರ್ನಾಟಕ ಸಚಿವರಾದ ಸುರೇಶ್ ಕುಮಾರ್, ಬಚ್ಚೇ ಗೌಡ, ತಮಿಳ್ನಾಡಿನ ಸಚಿವರು, ಶೋಭಾ ಕರಂದ್ಲಾಜೆ, ರಾಮಚಂದ್ರ ಗೌಡ, ಅಶೋಕ್ ಕುಮಾರ್, ತಮಿಳ್ನಾಡು ವಿಧಾನಸಭಾ ಸ್ಪೀಕರ್ ಔಡಪ್ಪಯನ್ ಸಚಿವರಾದ ದೊರೈಮುರುಗನ್, ತಮಿಳ್ನಾಡು ಸಚಿವರಾದ ಪೊನ್ಮುಡಿ, ಇಳಂಬುಳುದಿ, ಕೇಂದ್ರ ಸಚಿವರಾದ ರಾಜ, ಜಗತ್ರಕ್ಷಕನ್, ವೇಲು, ಕುರುಣಾನಿಧಿಯವರ ಪತ್ನಿ ಹಾಗೂ ಇತರರು ವೇದಿಕೆಯಲ್ಲಿ ಹಾಜರಿದ್ದಾರೆ.
ಕನ್ನಡದ ಖ್ಯಾತ ಸಾಹಿತಿಗಳಾದ ಚಿದಾನಂದ ಮೂರ್ತಿ, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ಕನ್ನಡ ಹಾಗೂ ತಮಿಳ್ನಾಡಿನ ಗಣ್ಯರು, ಸಾಹಿತಿಗಳು ಸಮಾರಂಭದಲ್ಲಿ ಹಾಜರಿದ್ದಾರೆ. ಇದಲ್ಲದೆ, ತಮಿಳ್ನಾಡನಿಂದ ಸಾವಿರಾರು ಮಂದಿ ಹರಿದು ಬಂದಿದ್ದಾರೆ.
ಖಾಕಿ ಕೋಟೆಯಾಗಿರುವ ಹಲಸೂರು ಕನ್ನಡ ಸಂಘಟನೆಗಳ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಾತಾವಣವೀಡಿ ಖಾಕಿ ಭದ್ರಕೋಟೆಯಾಗಿದೆ.
ವಜ್ರಪ್ರಹಾರ ದಳದ 60 ತುಕಡಿ, ಕೆಎಸ್ಆರ್‌ಪಿ 60 ತುಕಡಿ, ಸಿಎಆರ್ 30 ತುಕಡಿ, 45 ಮಂದಿ ಎಸಿಪಿಗಳು, 200 ಮಂದಿ ಇನ್ಸ್‌ಪೆಕ್ಟರ್‌ಗಳು 500 ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳು, ಸಾವಿರಕ್ಕೂ ಅಧಿಕ ಮಂದಿ ಎಎಸ್ಐ, ಮುಖ್ಯಪೇದೆ, ಪೇದೆಗಳು ಮಹಿಳಾ ಪೇದೆಗಳು ಹಾಗೂ ಇವರೊಂದಿಗೆ ಸಾವಿರ ಮಂದಿ ಗೃಹರಕ್ಷಕದಳದ ಸಿಬ್ಬಂದಿಗಳು ಭದ್ರಾತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಸಾರ್ವಜನಿಕರು ಸಮಾರಂಭಕ್ಕೆ ತೆರಳುವ ಮುನ್ನ ವಿಶೇಷ ತಪಾಸಣಾ ದ್ವಾರಗಳನ್ನು ಹಾದು ಬರುವ ವ್ಯವಸ್ಥೆ ಮಾಡಲಾಗಿತ್ತು. ತಮಿಳು ಸಂಘದ ಸುಮಾರು ಸಾವಿರ ಮಂದಿ ಸ್ವಯಂ ಸೇವಕರು ಪೊಲೀಸರಿಗೆ ಸಹಾಯ ಮಾಡುತ್ತಿದ್ದರು.
ಕರವೇ ಕಾರ್ಯಕರ್ತರ ಬಂಧನ ಈ ಮಧ್ಯೆ ಪ್ರತಿಭಟನೆ ನಡೆಸಲು ಸನ್ನದ್ಧರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಸುಮಾರು 50 ಕಾರ್ಯಕರ್ತರನ್ನು ಪೊಲೀಸರು ಭಾನುವಾರ ಮುಂಜಾನೆ ಬಂಧಿಸಿದ್ದಾರೆ. ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಅವಿತು ಕುಳಿತಿದ್ದ ಇವರನ್ನು ಪೊಲೀಸರು ವಶಪಡಸಿಕೊಂಡಿದ್ದಾರೆ. ಪ್ರತಿಮೆ ಅನಾವರಣಗ ಹಿನ್ನೆಲೆಯಲ್ಲಿ ಬಂದ್ ನಡೆಸಲು ಇವರು ಯೋಜಿಸಿದ್ದರು. ಎಲ್ಲೆಲ್ಲ ಸೂಕ್ಷ್ಮವೆಂದು ಪರಿಗಣಿಸಲಾಗಿದೆಯೋ ಅಲ್ಲೆಲ್ಲ ಪೊಲೀಸರು ನಿಗಾ ವಹಿಸಿದ್ದಾರೆ.