ರಾಜ್ಯದಲ್ಲಿ ಹಂದಿಜ್ವರ ಭೀತಿ: ಆಸ್ಪತ್ರೆ ಮುಂದೆ ಸರತಿ ಸಾಲು
ಬೆಂಗಳೂರು, ಭಾನುವಾರ, 9 ಆಗಸ್ಟ್ 2009( 12:23 IST )
ದೇಶದಲ್ಲಿ ಹಂದಿಜ್ವರ ಹೆಚ್ಚುತ್ತಿರುವಂತೆ ರಾಜ್ಯದಲ್ಲೂ ಜನತೆ ಆತಂಕಗೊಂಡಿದ್ದಾರೆ. "ಸಣ್ಣ ಜ್ವರ ಕಾಣಿಸಿಕೊಂಡರೂ ಜನರು ಹಂದಿಜ್ವರ ಪರೀಕ್ಷೆ ನಡೆಸಿ ಎಂದು ಕೇಳಿಕೊಳ್ಳಿತ್ತಿದ್ದಾರೆ. ಜನರು ಭಯಭೀತರಾಗಿದ್ದಾರೆ'' ಎಂದು ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯಾಧಿಕಾರಿ ನರೇಶ್ ಶೆಟ್ಟಿ ಹೇಳಿದ್ದಾರೆ.
ಬೆಂಗಳೂರಿನ 11 ಖಾಸಗಿ ಆಸ್ಪತ್ರೆಗಳಲ್ಲಿ ಹಂದಿಜ್ವರದ ಚಿಕಿತ್ಸೆ ನೀಡಲಾಗುತ್ತಿದೆ. ನಿಮ್ಹಾನ್ಸ್‌ನಲ್ಲಿ ಪ್ರತಿದಿನ 80 ರಕ್ತ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. ಇದೇ ರೀತಿ ಮಂಗಳೂರಿನ ಪ್ರಯೋಗಾಲಯದಲ್ಲೂ ರಕ್ತ ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪೆರುಮಾಳ್ ತಿಳಿಸಿದರು.
ರಾಜ್ಯದಲ್ಲಿ ಹಂದಿಜ್ವರ ಸೋಂಕಿತರಿಗೆ ನೀಡಲಾಗುವ ಟ್ಯಾಮಿಫ್ಲು ಮಾತ್ರಗಳ ಸಂಗ್ರಹವಿದ್ದು ಜನತೆ ಗಾಬರಿಗೊಳಗಾಗುವ ಅವಶ್ಯಕತೆ ಇಲ್ಲ ಎಂದು ಅವರು ಭರವಸೆ ನೀಡಿದ್ದಾರೆ.