"ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದ 24ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗಿಲ್ಲ. ಮುಂದಿನ ಹತ್ತಾರು ದಿನಗಳಲ್ಲಿ ಮಳೆಯಾಗದಿದ್ದರೆ ಬರ ಘೋಷಣೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡುತ್ತಿದ್ದರು. "ಬರ ಬರುವುದು ಬೇಡ. ಉತ್ತಮ ಮಳೆಯಾಗಿ ಪ್ರತಿವರ್ಷ ಎಲ್ಲ ಜಲಾಶಯಗಳಿಗೂ ಬಾಗಿನ ಅರ್ಪಿಸುವ ಸೌಭಾಗ್ಯ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ" ಅವರು ತಿಳಿಸಿದರು.
ಮುಂದಿನ ಕೆಲ ದಿನಗಳಲ್ಲಿ ಮಳೆಯಾಗುವ ಆಶಾಭಾವ ಇದೆ. ಮಳೆಯಾಗದಿದ್ದರೆ ಬರ ಘೋಷಣೆ ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜಲಪಾತೋತ್ಸವಕ್ಕೆ ಚಾಲನೆ ಮಂಡ್ಯದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಶನಿವಾರ ಅದ್ದೂರಿ ಚಾಲನೆ ದೊರೆಯಿತು. ರಾಜ್ಯದ ಜಾನಪದ ಕಲೆ, ಸಂಸ್ಕ್ಕತಿ ಬಿಂಬಿಸುವ ಸಾಂಸ್ಕ್ಕತಿಕ ಕಾರ್ಯಕ್ರಮಗಳು, ಹಿರಿಯ ಗಾಯಕ ಸಿ. ಅಶ್ವತ್ಥ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ ಸುಗಮ ಸಂಗೀತ ಕಾರ್ಯಕ್ರಮ ಜನರ ಮನಸೂರೆಗೊಳಿಸಿತು. ಭಾನುವಾರವೂ ಜಲಪಾತೋತ್ಸವ ನಡೆಯಲಿದೆ.
ಭೋರ್ಗರೆಯುತ್ತಿರುವ ಗಗನಸುಕ್ಕಿ ಜಲಪಾತದ ಹಿನ್ನೆಲೆಯಲ್ಲಿ ನಡೆದ ಉತ್ಸವ ಎಲ್ಲರನ್ನೂ ರಂಜಿಸಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಲಪಾತದ ಸುತ್ತ ಮಾಡಲಾಗಿದ್ದ ವಿದ್ಯುದ್ದೀಪಗಳ ಅಲಂಕಾರ ನೋಡುಗರಿಗೆ ಮುದ ನೀಡಿತು.