ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಂದುವರಿದ ಆಪರೇಶನ್ 'ಕಾಂಚನಾ' ಕಾರ್ಯಾಚರಣೆ (Bijapur | Borewell | Police | DC)
 
ಮೇಕೆ ಓಡಿಸಲು ಹೋಗಿ ಆಕಸ್ಮಿಕವಾಗಿ ಸೋಮವಾರ ಮಧ್ಯಾಹ್ನ ಕೊಳವೆ ಬಾವಿಗೆ ಬಿದ್ದ 4ರ ಹರೆಯದ ಪುಟ್ಟ ಪೋರಿಯನ್ನು ಮೇಲಕ್ಕೆತ್ತುವ ಕಾರ್ಯ ಮಂಗಳವಾರವೂ ಭರದಿಂದ ಮುಂದುವರಿದಿದೆ. ಆದರೆ ಮಳೆ, ಬಂಡೆಗಳಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವುದರಿಂದ ಮಗು ಬದುಕಿರುವ ಸಾಧ್ಯತೆ ತುಂಬಾ ಕ್ಷೀಣವಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಸೋಮವಾರದಂದು ಮೇಕೆ ಓಡಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸುಮಾರು 150 ಅಡಿ ಆಳದ ಕೊಳವೆ ಬಾವಿಗೆ 4ರ ಹರೆಯದ ಕಾಂಚನಾ ಎಂಬ ಬಾಲಕಿಯೊಬ್ಬಳು ಬಿದ್ದಿರುವ ಘಟನೆ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿತ್ತು.

ಬಾಲಕಿಯನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ನಿನ್ನೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಲ್ಲದೇ ಹೆಚ್ಚುವರಿಯಾಗಿ ಸಿಕಂದ್ರಾಬಾದ್‌ನಿಂದ 50 ಮಂದಿ ಹಾಗೂ ಬೆಳಗಾವಿ ಮರಾಠ ಇನ್‌ಫೆಂಟ್ರಿ ರೆಜಿಮೆಂಟ್‌ನ 15ಯೋಧರ ಪಡೆ ಭರದ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಬಾಲಕಿ ಕಾಂಚನಾಳ ದೇಹ ಸುಮಾರು 60ಅಡಿ ಆಳದಲ್ಲಿ ಸಿಲುಕೊಂಡಿದೆ. ಬಾಲಕಿಗೆ ನಿರಂತರವಾಗಿ ಆಮ್ಲಜನಕದ ಪೂರೈಕೆ ಮಾಡಲಾಗುತ್ತಿದೆ. ಏತನ್ಮಧ್ಯೆ ನಿನ್ನೆ ರಾತ್ರಿ ಮಳೆ ಬಂದ ಪರಿಣಾಮ ಕಾರ್ಯಾಚರಣೆಗೆ ಸ್ವಲ್ಪ ಅಡ್ಡಿಯಾಗಿತ್ತು. ಎರಡು ಜೆಸಿಬಿ ಯಂತ್ರಗಳು ಕೂಡ ಡೀಸೆಲ್ ಕೊರತೆಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಂತರ ಇದೀಗ ನಾಲ್ಕು ಜೆಸಿಬಿ ಯಂತ್ರ, ಅಗ್ನಿಶಾಮಕ ದಳ, ಯೋಧರ ಪಡೆ ಬಿರುಸಿನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯರ ತಂಡ, ತಹಸೀಲ್ದಾರ್ ಮೊಕ್ಕಾಂ ಹೂಡಿದ್ದಾರೆ. ಬಾಲಕಿ ಕೊಳವೆ ಬಾವಿಯೊಳಗೆ ಬಿದ್ದು 24ಗಂಟೆ ಕಳೆದಿದೆ. ಈಗಾಗಲೇ 45 ಅಡಿಯಷ್ಟು ಆಳದ ಹೊಂಡವನ್ನು ತೋಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಆದರೂ ಕೂಡ ಬಾಲಕಿಯ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಿರುವುದು ಮಗು ಬದುಕಿರುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಜ್ಜಿ ಮನೆಯಲ್ಲಿದ್ದ ನಾಲ್ಕು ವರ್ಷದ ಕಾಂಚನಾ ಎಂಬ ಬಾಲಕಿ ಮೇಕೆ ಓಡಿಸಲು ಹೋದ ಸಮಯದಲ್ಲಿ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಮಹಾರಾಷ್ಟ್ರದ ಸಾಂಗ್ಲಿಯಲ್ಲಿದ್ದ ಕಾಂಚನಾಳ ತಂದೆ ಬ್ರಹ್ಮಪ್ಪ ಅವರು ಊರಿಗೆ ಧಾವಿಸಿದ್ದಾರೆ. ಆದರೆ ಅಜ್ಜಿಯ ಬೇಜವಾಬ್ದಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬ್ರಹ್ಮಪ್ಪ ಘಟನಾ ಸ್ಥಳಕ್ಕೆ ಆಗಮಿಸಿ ವಾಪಸ್ ಹೊರಟು ಹೋಗಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ