ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾವಯವ ಕೃಷಿಯ‌ೂ ಅಪಾಯಕಾರಿ: ಸುಭಾಷ್ ಪಾಳೇಕರ್ (Subhash | Tumkur | Basavashri)
Feedback Print Bookmark and Share
 
ರಾಸಾಯನಿಕ ಕೃಷಿಯಷ್ಟೇ ಸಾವಯವ ಕೃಷಿಯೂ ಅಪಾಯಕಾರಿ. ಈ ಪದ್ಧತಿಗಳಿಂದ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಬಸವಶ್ರೀ ಪ್ರಶಸ್ತಿ ಪುರಸ್ಕೃತ ಸುಭಾಷ್ ಪಾಳೇಕರ್ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ಜಿಲ್ಲಾ ನೈಸರ್ಗಿಕ ಕೃಷಿ ಆಂದೋಲನ ಸಮಿತಿಯು ನಗರದಲ್ಲಿ ಏರ್ಪಡಿಸಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾವಯವ ಮತ್ತು ರಾಸಾಯನಿಕ ಕೃಷಿಯಂಥ ಪದ್ಧತಿಗಳಿಂದ ಬರ ಹಾಗೂ ಅತಿವೃಷ್ಟಿಯೇ ಮೊದಲಾದ ಪ್ರಕೃತಿ ವಿಕೋಪಗಳನ್ನು ರೈತರು ಎದುರಿಸಬೇಕಾಗಿ ಬಂದಿದೆ. ಮುಂಬರುವ ದಿನಗಳಲ್ಲಿ ಇದು ಇನ್ನೂ ಭೀಕರವಾಗಬಹುದು ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಿದರೆ ರೈತರನ್ನು ಅಪಾಯದಿಂದ ಪಾರುಮಾಡಬಹುದು ಎಂದು ತಿಳಿಸಿದರು.

ಆದ್ದರಿಂದ, ರಾಜ್ಯದಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಕೃಷಿ ಮಿಷನನ್ನು ಬದಲಾಯಿಸಿ ನೈಸರ್ಗಿಕ ಕೃಷಿ ಮಿಷನ್ ಎಂದು ಪರಿವರ್ತಿಸಿ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರಿಗೆ ಆರ್ಥಿಕ ನೆರವು ನೀಡಬೇಕು. ಹೀಗೆ ಮಾಡುವುದರಿಂದ ಹಿಂದೆ ನಡೆದಿರಬಹುದಾದ ತಪ್ಪುಗಳು ಸರಿಯಾದಂತಾಗುತ್ತದೆ ಎಂದು ಸುಭಾಷ್ ಪಾಳೇಕರ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಾವಯವ, ರಾಸಾಯನಿಕ, ಸುಭಾಷ್, ಕೃಷಿ