ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪರಿಹಾರ ಹಣ ದುರುಪಯೋಗವಾದಲ್ಲಿ ಕ್ರಿಮಿನಲ್ ಕೇಸ್: ಈಶ್ವರಪ್ಪ (Flood | Iswarappa | Criminal Case | Fund)
Feedback Print Bookmark and Share
 
ಸಂಘ- ಸಂಸ್ಥೆಗಳು, ಸಾರ್ವಜನಿಕರು ನೀಡಿರುವ ನೆರೆ ಪರಿಹಾರ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಣದ ಜೊತೆಗೆ ಸಾರ್ವಜನಿಕರು ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು ನೀಡಿರುವ ಹಣವನ್ನು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಇದಕ್ಕಾಗಿ ಉಗ್ರವಾದ ಕಾನೂನನ್ನು ತಂದು ಭ್ರಷ್ಟರನ್ನು ಶಿಕ್ಷಿಸುವುದಾಗಿ ಹೇಳಿದ್ದಾರೆ.

ನೆರೆ ಸಂತ್ರಸ್ತರ ಜನಜೀವನವನ್ನು ಮಾಮೂಲಿಯಂತೆ ಮಾಡಿಕೊಳ್ಳಲು ಜನತೆ ಉದಾರ ನೆರವು ನೀಡುತ್ತಿದ್ದು, ಇದರ ಬಿಡಿಗಾಸು ಪೋಲಾಗದಂತೆ ಎಚ್ಚರಿಕೆ ವಹಿಸಲಾಗುವುದು. ಎಷ್ಟೇ ಕಠಿಣ ಕ್ರಮ ಕೈಗೊಂಡರೂ. ಶೇ. 2ರಷ್ಟು ಪೋಲಾಗುತ್ತದೆ. ಈ ಹಣವನ್ನು ಪೋಲಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ತದಡಿ ವಿದ್ಯುತ್ ಯೋಜನೆ ಅನಿವಾರ್ಯ
ಇದೇ ವೇಳೆ ವಿದ್ಯುತ್ ಕೊರತೆಯನ್ನು ನೀಗಿಸಲು ತದಡಿ ವಿದ್ಯುತ್ ಯೋಜನೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಮೂರುವರೆ ವರ್ಷದ ಆಡಳಿತಾವಧಿಯಲ್ಲಿ 10 ವರ್ಷಗಳಿಗಾಗುವಷ್ಟು ವಿದ್ಯುತ್ ಉತ್ಪಾದಿಸಿ ವಿದ್ಯುತ್ ಸ್ವಾವಲಂಬಿ ಕರ್ನಾಟಕ ಮಾಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ