ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 2 ಗಂಟೆ ಹೆಚ್ಚುವರಿ ಕೆಲಸ- ಆದೇಶವಲ್ಲ ಮನವಿ: ಸಿಎಂ (Govt Servents | Flood | Ydyurappa | Calamity)
Feedback Print Bookmark and Share
 
ರಾಜ್ಯದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕೆಲಸಗಳನ್ನು ನೆರವಾಗಲು ಸರ್ಕಾರಿ ಅಧಿಕಾರಿಗಳು, ನೌಕರರು ನಿತ್ಯ 2 ಗಂಟೆ ಹೆಚ್ಚುವರಿ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ರಾಜ್ಯ ಕಂಡರಿಯದ ಪ್ರಕೃತಿ ವಿಕೋಪ ಇದಾಗಿದ್ದು, ಈ ಕಾರ್ಯಕ್ಕೆ ಪ್ರತಿಯೊಬ್ಬ ನಾಗರಿಕನ ಬದ್ಧತೆ ಅಗತ್ಯ. ನೊಂದವರಿಗೆ ಸೌಲಭ್ಯ ಸಕಾಲಕ್ಕೆ ತಲುಪಬೇಕಾದರೆ ನೌಕರರ ಪಾತ್ರ ಪ್ರಮುಖ. ಇದಕ್ಕಾಗಿ ನೌಕರರು ಎರಡು ಗಂಟೆ ಹೆಚ್ಚು ಕೆಲಸ ಮಾಡುವುದರಿಂದ ಪರಿಹಾರ ಪುನರ್ವಸತಿ ಪ್ರಕ್ರಿಯೆ ಸುಗಮವಾಗಲಿದೆ ಎಂದು ತಿಳಿಸಿದ್ದಾರೆ.

ಆದರೆ ಇದು ಸ್ವಪ್ರೇರಣೆಯಿಂದ ಮಾಡಬೇಕೆ ಹೊರತು ಬಲವಂತವಲ್ಲ ಎಂದು ತಿಳಿಸಿರುವ ಅವರು, ಸರ್ಕಾರಿ ಅಧಿಕಾರ, ನೌಕರರು ಸಂಕಷ್ಟದಲ್ಲಿರುವ ತಮ್ಮ ಸಹೋದರ ಸಹೋದರಿಯರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯ ಸ್ಪಂದನ ತೋರಿದ್ದಾರೆ. ಮಳೆ-ಪ್ರವಾಹದಿಂದಾಗಿ ಆಹಾರ ಬಟ್ಟೆ, ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡ ಜನತೆಯ ಬದುಕು ಮತ್ತೆ ಮುಂಚಿನ ಸ್ಥಿತಿಗೆ ಬರಲು ನೆರವಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಂಕಷ್ಟದ ಸಂದರ್ಭಕ್ಕೆ ಅಪಾರ ಕಾಳಜಿಯಿಂದ ಸ್ಪಂದಿಸಿ ಎಲ್ಲಾ ನೌಕರರ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡುವ ನಿರ್ಧಾರ ಕೈಗೊಂಡಿರುವುದನ್ನು ಮುಖ್ಯಮಂತ್ರಿ ಸ್ವಾಗತಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ