ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಲಾಢ್ಯರ ಕೈ ಸೇರುತ್ತಿರುವ ನೆರೆ ಪರಿಹಾರ: ಸ್ವಾಮೀಜಿ (Flood relief | Karnataka | Tumkur | Yediyurappa)
Feedback Print Bookmark and Share
 
ನೆರೆ ಸಂತ್ರಸ್ತರ ಹೆಸರಿನಲ್ಲಿ ಸಂಗ್ರಹಿಸಲಾಗುತ್ತಿರುವ ದೇಣಿಗೆ ಹಣವು ಅವರನ್ನು ಸೇರುವ ಬದಲು ಬಲಾಢ್ಯರ ಕೈ ಸೇರುತ್ತಿದೆ ಎಂದು ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿಯವರು ವಿಷಾದಿಸಿದ್ದಾರೆ.

ದೇಣಿಗೆ ಹಣ ಸಮರ್ಪಕವಾಗಿ ವಿತರಣೆಯಾಗಬೇಕಿದ್ದರೆ, ಪ್ರತಿ ಮಂಡಲ ಪಂಚಾಯಿತಿ ವ್ಯಾಪ್ತಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸುವುದು ಅತ್ಯಗತ್ಯ ಎಂದು ತಿಳಿಸಿದ ಸ್ವಾಮೀಜಿ, ಮುಖ್ಯಮಂತ್ರಿಗಳು ಅವರಿಂದ ದಿನನಿತ್ಯವೂ ವರದಿಯನ್ನು ತರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ನೆರವಾಗುತ್ತದೆ ಎಂದು ನುಡಿದರು.
Flood
News Room
NRB


ಕಂದಾಯ ಇಲಾಖೆಯೂ ಸೇರಿದಂತೆ ಸರ್ಕಾರದ ಇತರೆ ಅಧಿಕಾರಿಗಳಾಗಲೀ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಸ್ಥಳೀಯ ಶಾಸಕರಾಗಲೀ, ಸಚಿವರಾಗಲೀ ಸದರಿ ಪ್ರದೇಶಗಳಿಗೆ ಭೇಟೀ ನೀಡದೆ ನಗರಗಳಲ್ಲೇ ಇದ್ದುಕೊಂಡು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಷಾದಿಸಿದ ಸ್ವಾಮೀಜಿಯವರು, ನೆರೆ ಹಾವಳಿ ಪ್ರದೇಶಗಳಲ್ಲಿ ಒಂದು ಸಾವಿರ ಮನೆಗಳನ್ನು ಕಟ್ಟಿಸಿಕೊಡುವುದಾಗಿ ಕೆಲ ಸಚಿವರು ಹೇಳಿಕೆ ನೀಡಿರುವುದು ಕೇವಲ ಪತ್ರಿಕಾ ಹೇಳಿಕೆಗಳಾಗಿಯೇ ಉಳಿದಿವೆಯೇ ಹೊರತು ವಾಸ್ತವವಾಗಿ ಪರಿವರ್ತನೆಯಾಗಿಲ್ಲ ಎಂದು ನುಡಿದರು.

ನೆರೆಹಾವಳಿಗೆ ಸಿಲುಕಿದ ಲಕ್ಷಾಂತರ ಮಂದಿ ಸಂತ್ರಸ್ತರಿಗೆ ಮಠದ ವತಿಯಿಂದ ಆಹಾರಧಾನ್ಯಗಳು, ಹಣ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಿರುವುದರ ಜೊತೆಗೆ, ಉತ್ತರ ಕರ್ನಾಟಕ ಪ್ರದೇಶದ ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು, ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಿಕ್ಷಣದವರೆಗೆ ಉಚಿತ ಶಿಕ್ಷಣವನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ