ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಪ್‌ಕಾಮ್ಸ್‌ನಿಂದ ಸಂಚಾರಿ ಮಾರಾಟ ಮಳಿಗೆ ಆರಂಭ (Hopcoms | Bangalore | Karnataka | Vegetable)
Feedback Print Bookmark and Share
 
ಹಾಪ್‌ಕಾಮ್ಸ್ ವತಿಯಿಂದ ನಗರದ ಆಯ್ದ 20 ಭಾಗಗಳಲ್ಲಿ ಹಣ್ಣು ಮತ್ತು ತರಕಾರಿಗಳ ಸಂಚಾರಿ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಬಿ. ಮುನೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಹಾಗೂ ಉತ್ತಮ ವ್ಯವಸ್ಥೆಯ ಮೂಲಕ ಹಣ್ಣು ಹಾಗೂ ತರಕಾರಿಗಳ ಮಾರಾಟವನ್ನು ಕೈಗೊಳ್ಳಬೇಕೆಂಬುದು ಹಾಪ್‌ಕಾಮ್ಸ್ ಉದ್ದೇಶ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ಪ್ರತಿಬಾರಿ ಹಬ್ಬ-ಹರಿದಿನಗಳು ಬಂದಾಗಲೂ ಸಹ ಶೇಕಡಾ 10ರ ರಿಯಾಯಿತಿಯನ್ನು ನೀಡಲಾಗುತ್ತಿತ್ತು. ಆದರೆ ಇದು ಗ್ರಾಹಕರನ್ನು ಅಥವಾ ಫಲಾನುಭವಿಗಳನ್ನು ತಲುಪುವ ಬದಲಿಗೆ ಖಾಸಗಿಯವರಿಗೆ ತಲುಪುತ್ತಿತ್ತು. ಆದ್ದರಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಈ ಪರಿಪಾಠಕ್ಕೆ ತಡೆಹಾಕಲಾಗಿದೆ ಎಂದು ತಿಳಿಸಿದರು.

ಆದರೆ ಎಲ್ಲಾ ವರ್ಗದ ಜನರಿಗೂ ಹಣ್ಣು-ತರಕಾರಿಗಳು ಕೈಗೆಟುಕುವ ದರದಲ್ಲಿ ಸಿಗಬೇಕೆನ್ನುವ ದೃಷ್ಟಿಯಿಂದ ಹಾಪ್‌ಕಾಮ್ಸ್ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಬಡಾವಣೆಗಳಲ್ಲಿರುವ ಮಳಿಗೆಗಳಲ್ಲದೆ, ಜಯನಗರ, ಇಂದಿರಾನಗರ ಸೇರಿದಂತೆ ಆಯ್ದ 20 ಬಡಾವಣೆಗಳಲ್ಲಿ ಸಂಚಾರಿ ಮಾರಾಟ ಮಳಿಗೆಗಳ ವ್ಯವಸ್ಥೆ ಮಾಡುವ ನಿರ್ಧಾರ ಮಾಡಲಾಯಿತು ಎಂದು ಮುನೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ