ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜಾಪುರ ಶಾಂತೇಶ್ವರ ದೇವಾಲಯದ ಭಯಹುಟ್ಟಿಸುವ ಪದ್ಧತಿ! (Karnataka | Bijapur | Shanteshwara temple | Child Rights,)
Bookmark and Share Feedback Print
 
ರಾಜ್ಯದ ಬಿಜಾಪುರದ ದೇವಾಲಯವೊಂದರಲ್ಲಿ ಎಳೆಹಸುಳೆಗಳನ್ನು ಸಂಪ್ರದಾಯದ ಹೆಸರಲ್ಲಿ ಸುಮಾರು 20ಅಡಿಗಳಷ್ಟು ಎತ್ತರದಿಂದ ಕೆಳಕ್ಕೆಸೆಯುವ ಅಮಾನವೀಯ ಧಾರ್ಮಿಕ ಪದ್ಧತಿಯನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿರುವುದಾಗಿ ತಿಳಿಸಿದೆ.

ಬಿಜಾಪುರದ ಇಂಡಿ ತಾಲೂಕಿನಲ್ಲಿರುವ ಸುಮಾರು ಒಂದು ಶತಮಾನಗಳಷ್ಟು ಇತಿಹಾಸ ಹೊಂದಿರುವ ಶಾಂತೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಡೆದ ಜಾತ್ರೆಯ ಸಂದರ್ಭದಲ್ಲಿ ಎರಡು ವರ್ಷಕ್ಕಿಂತ ಕೆಳಗಿನ ಸುಮಾರು 200ಮಕ್ಕಳನ್ನು ದೇವಾಲಯದ ಟೆರೆಸ್ ಮೇಲಿನಿಂದ ಕೆಳಕ್ಕೆ ಎಸೆಯುವ ಧಾರ್ಮಿಕ ಆಚರಣೆ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಹೀಗೆ ಮಕ್ಕಳನ್ನು ಮೇಲಿನಿಂದ ಕೆಳಕ್ಕೆ ಎಸೆಯುವ ಆಚರಣೆಯಿಂದಾಗಿ ಮುಂದೆ ಮಕ್ಕಳು ಆರೋಗ್ಯವಾಗಿ, ಗಟ್ಟಿಯಾಗಿ, ಉತ್ತಮವಾಗಿ ಬೆಳೆಯುತ್ತಾರೆ ಎಂಬ ನಂಬಿಕೆ ಭಕ್ತರದ್ದು. ಆ ಕಾರಣಕ್ಕಾಗಿ ಸುಮಾರು 20ಅಡಿಗಳಷ್ಟು ಮೇಲಿನಿಂದ ಮಕ್ಕಳನ್ನು ಕೆಳಕ್ಕೆ ಎಸೆಯಲಾಗುತ್ತದೆ. ಆ ಮಕ್ಕಳನ್ನು ಕೆಳಗಡೆ ನಿಂತಿರುವ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಿಡಿದು, ಪೋಷಕರಿಗೆ ಒಪ್ಪಿಸುತ್ತಾರೆ.

'ಎಳೆಗೂಸುಗಳನ್ನು ಧಾರ್ಮಿಕ ಆಚರಣೆಯ ಹೆಸರಲ್ಲಿ ಮೇಲಿನಿಂದ ಕೆಳಕ್ಕೆ ಎಸೆಯುವ ಈ ಅಮಾನವೀಯ ಪದ್ಧತಿಯನ್ನು ನಿಷೇಧಿಸಲು ನಿರ್ಧರಿಸಿರುವುದಾಗಿ' ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇಂತಹ ಅಮಾನವೀಯ ಪದ್ಧತಿಗಳು ಕರ್ನಾಟಕದ ಇನ್ನೂ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವುದಾಗಿಯೂ ಅವರು ವಿವರಿಸಿದರು.
ಬಿಜಾಪುರ ಶಾಂತೇಶ್ವರ ದೇವಾಲಯದಲ್ಲಿ ಜನರನ್ನೇ ದಂಗುಬಡಿಸುವಂತಹ ಧಾರ್ಮಿಕ ಆಚರಣೆಯ ವಿರುದ್ಧ ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿ ನೀಡಿರುವುದಾಗಿಯೂ ಹೇಳಿದರು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗುವುದು ಎಂದು ತಿಳಿಸಿದರು.

ಆದರೆ ಇಂತಹ ಅಸಂಗತವಾದ ಧಾರ್ಮಿಕ ಪದ್ಧತಿಯ ಆಚರಣೆಯ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಕಸುಗುಡಾ ಬಿರಾದಾರ ಅವರಿಗೆ ಮಾತ್ರ ಯಾವುದೇ ತಪ್ಪು ಕಾಣಿಸುತ್ತಿಲ್ಲವಂತೆ. ಹಲವು ವರ್ಷಗಳಿಂದ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಈವರೆಗೂ ಯಾವುದೇ ಅವಘಡ ನಡೆದಿಲ್ಲ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ